ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಂತಿಮ 'ಯಾನ'ದ ಆಚೆಗೆ ಇನ್ನೂ ಉತ್ತರ ಸಿಕ್ಕಿಲ್ಲ

Lingaraj Badiger
Updated On : 30 Jul 2014, 10:37 am

ಹುಬ್ಬಳ್ಳಿ: ಬದುಕಿನ ಅಂತ್ಯದ ಮುಂದಿನ ಸತ್ಯವನ್ನು ಸಾಹಿತಿಯಿಂದ ಹೇಳುವುದು ಅಸಾಧ್ಯದ ಮಾತು. ಇದನ್ನು ಅಧ್ಯಾತ್ಮದ ಸಾಧಕರು ಹೇಳಬೇಕಷ್ಟೇ. ಅದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳೋ, ಒಪ್ಪುವುದು ಬಿಡುವುದೋ ಎನ್ನುವ ವಿಚಾರದಲ್ಲಿ ನಾನೂ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. 'ಯಾನ' ಕಾದಂಬರಿಯಲ್ಲಿ ಬದುಕಿನ ಅಂತ್ಯದ ಬಳಿಕ ಏನು? ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ಸರಸ್ವತಿ ಸಮ್ಮಾನ ಪುರಸ್ಕೃತ ಡಾ೤ ಎಸ್.ಎಲ್. ಭೈರಪ್ಪ ಹೇಳಿದರು.
ಪ್ರೊ. ಶ್ರೀನಿವಾಸ ತೋಫಖಾನೆ ದ್ವಿತೀಯ ಪುಣ್ಯತಿಥಿ ಹಾಗೂ ಅವರ ಕೈ ಬರಹದ ಕೃತಿ 'ಯುಗಧರ್ಮ'ದ ಬಿಡುಗಡೆ ಸಮಾರಂಭಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಅನೌಪಚಾರಿಕವಾಗಿ ಮಾತನಾಡುತ್ತಾ, ಬದುಕಿನ ನಂತರ ಏನು ಎನ್ನುವುದನ್ನು ಅಧ್ಯಾತ್ಮ ಸಾಧಕರು ನಿಖರವಾಗಿ ಹೇಳುತ್ತಾರಾದರೂ ಇದಕ್ಕೆ ಆಧಾರವಿಲ್ಲ. ಆದರೆ ವಿಜ್ಞಾನಿಗಳು ಪ್ರಯೋಗ ಸಮೇತ ಕೆಲ ವಿಷಯಗಳು ಪ್ರಸ್ತುತಪಡಿಸುತ್ತಾರೆ. ಅವರ ಮಾತು ಸತ್ಯಕ್ಕೆ ಹತ್ತಿರವಾಗಿರುತ್ತದೆ, ನಂಬಲು ಅರ್ಹವಾಗಿರುತ್ತದೆ. ಆದರೆ ಸಾವಿನ ನಂತರದ ಸತ್ಯ ಈಗಲೂ ಅಸ್ಪಷ್ಟವಾಗಿದೆ. ಈ ಬಗ್ಗೆ ಯಾನದಲ್ಲಿ ಹೆಚ್ಚಿನ ವಿಷಯವಿಲ್ಲ. ಇದನ್ನು ಹೊರತಾಗಿ, 'ಯಾನ'ದಲ್ಲಿ ಪ್ರಮುಖವಾಗಿ ಇಹಲೋಕದಲ್ಲಿರುವ ಮೌಲ್ಯಗಳು ಸೂರ್ಯನಿಂದ ಆಚೆಗೆ ಹೋದಾಗಲೂ ಇರುತ್ತದೆಯೋ ಎನ್ನುವ ಪ್ರಶ್ನೆಯನ್ನು ಎತ್ತಿದ್ದೇನೆ. ಈ ಬಗ್ಗೆ ನನ್ನ ಬಳಿಯೂ ನಿಖರವಾದ ಉತ್ತರವಿಲ್ಲ. ನಾನೂ ಕೃತಿಯ ಮೂಲಕ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನಕ್ಕೆ ಕೈಹಾಕಿದ್ದೇನೆ ಎಂದು ಹೇಳಿದರು.
ಈ ವಿಷಯವನ್ನು ಚರ್ಚೆಗೆ ಬಿಟ್ಟಿದ್ದೇನೆ. ಈವರೆಗೂ ಸೂಕ್ತ ಉತ್ತರ ತಮಗೆ ಸಿಕ್ಕಿಲ್ಲ. ವಿಜ್ಞಾನ ಹಾಗೂ ಅಧ್ಯಾತ್ಮದ ದೃಷ್ಟಿಕೋನ 'ಯಾನ'ದಲ್ಲಿ ಚರ್ಚೆಗೊಳಪಟ್ಟಿದೆ. ನನಗೆ ತಿಳಿದಿದ್ದನ್ನು ಇದರಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಭೈರಪ್ಪ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement