ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಐವರು ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ

Lingaraj Badiger
Updated On : 31 Jul 2014, 11:08 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 30
ಉತ್ತರ ಕರ್ನಾಟಕದ ಅಭಿವೃದ್ಧಿ ಪರ ಹೋರಾಟಗಳಿಂದಲೇ ಹೆಸರು ಗಳಿಸಿರುವ ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 86ನೇ ಸಂಸ್ಥಾಪಕರ ದಿನಾಚರಣೆ ಆ. 1ರಂದು ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಐವರು ಉದ್ಯಮಿಗಳಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.
ಮಧ್ಯಾಹ್ನ್ನ 3.30ಕ್ಕೆ ಜರುಗುವ ಈ ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಸಂಸ್ಥೆಯಿಂದ ಸಂಸ್ಥಾಪಕರ ದಿನಾಚರಣೆಯ ನಿಮಿತ್ತ ವಾಣಿಜ್ಯ ರತ್ನ್ನ ಪ್ರಶಸ್ತ್ನಿ ನೀಡಲಾಗುತ್ತಿದೆ. ಫಾಸ್ಟನರ್ಸ್ ಆ್ಯಂಡ್ ಅಲೈಡ್ ಪ್ರೊಡಕ್ಟ್ಸ್‌ನ ಮುಖ್ಯಸ್ಥ ವೀರೇಂದ್ರ ಕೌಜಲಗಿ, ಪ್ರೊಸಿಟ್ರಾನ್ ಎಂಜಿನಿಯರಿಂಗ್ ಕಾರ್ಪೊರೇಶನ್‌ನ ಶ್ರೀಧರ ಉಪ್ಪಿನ, ಎಂ.ಎಂ. ಇಂಡಸ್ಟ್ರೀಯಲ್ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸುಧೀರ ಮಾಂಡೆ, ಎಕ್ಸ್‌ಲ್ ಫುಡ್ಸ್‌ನ ಪ್ರಕ್ರಾಶ ಕನ್ನೂರ, ನಿರ್ಮಲ ಜ್ಯುವೆಲರ್ಸ್‌ನ ಓಂಕಾರಮಲ್ ರಾಠೋಡಗೆ ಈ ಬಾರಿ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಹಿರೋ ಮೋಟ್‌ರ್ಸ್ ಧಾರವಾಡದಲ್ಲಿ ಸ್ಥಾಪನೆಯಾಗುವ ಆಶಾಭಾವನೆ ಇದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ನಿಯೋಗ ಚರ್ಚಿಸಿದೆ. ಧಾರವಾಡದ ಮುಮ್ಮಿಗಟ್ಟಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕಂಪನಿಗೆ ತಾಂತ್ರಿಕ ತಜ್ಞರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ ಎಂದರು. ಸಂಸ್ಥೆಯ ಉಪಾಧ್ಯಕ್ಷರಾದ ರಮೇಶ ಪಾಟೀಲ, ಕೆ.ಡಿ. ಕೊಟೇಕರ್, ಅಜ್ಜಂಪುರ ಶೆಟ್ರು ಇದ್ದರು.


ಪ್ರಶಸ್ತಿಗೆ ಆಯ್ಕೆಯಾದವರು
ಫಾಸ್ಟನರ್ಸ್ ಆ್ಯಂಡ್ ಅಲೈಡ್ ಪ್ರೊಡಕ್ಟ್ಸ್‌ನ ಮುಖ್ಯಸ್ಥ ವೀರೇಂದ್ರ ಕೌಜಲಗಿ, ಪ್ರೊಸಿಟ್ರಾನ್ ಎಂಜಿನಿಯರಿಂಗ್ ಕಾರ್ಪೊರೇಶನ್‌ನ ಶ್ರೀಧರ ಉಪ್ಪಿನ, ಎಂ.ಎಂ. ಇಂಡಸ್ಟ್ರೀಯಲ್ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸುಧೀರ ಮಾಂಡೆ, ಎಕ್ಸ್‌ಲ್ ಫುಡ್ಸ್‌ನ ಪ್ರಕ್ರಾಶ ಕನ್ನೂರ, ನಿರ್ಮಲ ಜ್ಯುವೆಲರ್ಸ್‌ನ ಓಂಕಾರಮಲ್ ರಾಠೋಡ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement