ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿದ್ಯಾವರ್ಧಕ ಸಂಘ:ಪಾಟೀಲ ಪುಟ್ಟಪ್ಪ ಆಯ್ಕೆ

Mainashree
Updated On : 9 Jun 2014, 11:10 am

ಧಾರವಾಡ: ಇಲ್ಲಿಯ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸತತವಾಗಿ 50 ವರ್ಷಗಳಿಗೆ ಅಧ್ಯಕ್ಷ ಸ್ಥಾನಕ್ಕೆ ನಾಡೋಜ ಪಾಟೀಲ ಪುಟ್ಟಪ್ಪ ಭಾಜನರಾಗಿದ್ದಾರೆ.
ಡಾ. ಪುಟ್ಟಪ್ಪ ವಿರುದ್ಧ ಕರ್ನಾಟಕ ವಿವಿ ಸಂಗೀತ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಅಗಡಿ ಸ್ಪರ್ಧಿಸಿದ್ದು 919 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 2,919 ಮತಗಳು ಚಲಾವಣೆಯಾಗಿದ್ದು, ಡಾ. ಪಾಪು ಅವರಿಗೆ 1,895 ಮತಗಳು ಬಂದಿವೆ. ಅಗಡಿ ಅವರಿಗೆ 976 ಮತಗಳು ಬಿದ್ದಿದ್ದು, 919 ಮತಗಳ ಅಂತರವಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಎಚ್.ವಿ. ಶಿವಪ್ಪ, ಅರವಿಂದ ಏಗನಗೌಡರ ಹಾಗೂ ಶಿವಪುತ್ರ ಬೆಲ್ಲದ ಸ್ಪರ್ಧಿಸಿದ್ದು, 1,678 ಮತ ಪಡೆದು ಶಿವಪುತ್ರಪ್ಪ ಬೆಲ್ಲದ ಗೆಲವು ಸಾಧಿಸಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಡಾ. ಡಿ.ಎಂ. ಹಿರೇಮಠ ಹಾಗೂ ಡಾ. ವಿ.ಬಿ. ರಾಜೂರ ಪೈಕಿ ಡಾ. ಡಿ.ಎಂ. ಹಿರೇಮಠ 1,480 ಮತ ಪಡೆದು ಜಯ ಸಾಧಿಸಿದರು. ಕೋಶಾಧ್ಯಕ್ಷ ಸ್ಥಾನಕ್ಕೆ ಶಂಕರ ಕುಂಬಿ ಹಾಗೂ ಕೃಷ್ಣ ಜೋಶಿ ಅವರಲ್ಲಿ ಕೃಷ್ಣ ಜೋಶಿ 1,890 ಮತ ಪಡೆದು ಗೆಲವು ಸಾಧಿಸಿದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹನುಮಾಕ್ಷಿ ಗೋಗಿ, ಶಂಕರ ಹಲಗತ್ತಿ ಹಾಗೂ ಅಶೋಕ ಏಣಗಿ ಅವರಲ್ಲಿ ಶಂಕರ ಹಲಗತ್ತಿ 1,661 ಮತ ಪಡೆದು ಗೆದ್ದಿದ್ದಾರೆ. ಇನ್ನು, ಸಹ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಾನಂದ ಬಾವಿಕಟ್ಟಿ, ಸದಾನಂದ ಶಿವಳ್ಳಿ ಹಾಗೂ ಮೋಹನ ರಾಮದುರ್ಗ ಅವರ ಪೈಕಿ ಶಿವಾನಂದ ಭಾವಿಕಟ್ಟಿ 1,495 ಮತಗಳಿಂದ ಗೆಲವು ಸಾಧಿಸಿದ್ದಾರೆ.
ಕಾರ್ಯಕಾರಿಗೆ...: ಹಾಗೆಯೇ ಕಾರ್ಯಕಾರಿ ಸಮಿತಿಗೆ ಒಟ್ಟು 31 ಅಭ್ಯರ್ಥಿಗಳ ಪೈಕಿ ಒಂಭತ್ತು ಜನ ಗೆಲವು ಸಾಧಿಸಿದ್ದಾರೆ. ಗುರು ಹಿರೇಮಠ (1,215), ವಿಶ್ವೇಶ್ವರಿ ಬಸಲಿಂಗಯ್ಯ (1,190), ಸಂಜೀವ ಕುಲಕರ್ಣಿ (1,505), ಮೋಹನ ನಾಗಮ್ಮನವರ (1,251), ಮನೋಜ್ ಪಾಟೀಲ್ (924), ಗುರು ತಿಗಡಿ (1,094), ಸತೀಶ ತುರಮರಿ (993), ಪ್ರಕಾಶ ಹುಡಿಕೇರಿ (1,129) ಆಯ್ಕೆಯಾಗಿದ್ದಾರೆ. ನಿರ್ವಾಚನಾಧಿಕಾರಿಯಾಗಿ ಸಿ.ಎಸ್. ನೇಗಿನಹಾಳ ಕೆಲಸ ಮಾಡಿದರು.
ಬೆಳಗ್ಗೆ 7ರಿಂದ ಆರಂಭವಾದ ಮತದಾನ ಸಂಜೆ 4ರ ವರೆಗೆ ನಡೆಯಿತು. ಒಟ್ಟು 5,580 ಮತಗಳ ಪೈಕಿ ಸರಾಸರಿ 3,000 ಮತಗಳು ಚಲಾವಣೆಯಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement