ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಲಘಟಗಿಯಲ್ಲಿ ವಸಂತ ಹೊರಟ್ಟಿ ಪ್ರಚಾರ

Lingaraj Badiger
Updated On : 20 Jun 2014, 11:06 am

ಕಲಘಟಗಿ: ನನ್ನ್ನ ತಂದೆಯವರು ಮೂವತ್ತು ವರ್ಷಗಳಿಂದ ಶಿಕ್ಷಕರ ಹಾಗೂ ಪದವೀಧರರ ಸೇವೆ ಮಾಡುತ್ತಾ ಬಂದಿದ್ದಾರೆ. ನಾನು ಅವರ ನೆರಳಲ್ಲಿ ಬೆಳೆದವನಾಗಿದ್ದರಿಂದ ಅವರ ಮಾರ್ಗದರ್ಶನ ಸಿಗಲಿದೆ. ತನ್ಮೂಲಕ ನಿಮ್ಮ ಸೇವೆ ಮಾಡುತ್ತೇನೆಂದು ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ವಸಂತ ಹೊರಟ್ಟಿ ಹೇಳಿದರು.
ಕಲಘಟಗಿಯ ಜನತಾ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಯುವಕರ ಸಮಸ್ಯೆಗಳನ್ನ್ನು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಯುವಕರು ಹಾಗೂ ಪದವೀಧರರಿಗೆ ಅನೇಕ ಸಮಸ್ಯೆಗಳಿವೆ. ಇದಕ್ಕೆ ಪರಿಹಾರ ಕಲ್ಪಿಸಬೇಕೆಂಬುದು ತಮ್ಮ ಬಯಕೆ, ಚುನಾವಣೆಯಲ್ಲಿ ಗೆಲ್ಲಿಸಿ ಸೇವೆಗೆ ಅವಕಾಶ ನೀಡಬೇಕೆಂದು ಕೋರಿದರು.  ಈ ಸಂದರ್ಭದಲ್ಲಿ ಡಾ. ಎಚ್.ಬಿ. ಪಾಟೀಲ, ಮಲ್ಲಯ್ಯಸ್ವಾಮಿ ಗುಡಿಮನಿ, ಎನ್.ಆರ್. ಬಾಳಿಕಾಯಿ, ಜೆ.ಎ.ಜಾಹಗೀರದಾರ, ಆನಂದ ಕುಲಕರ್ಣಿ, ಆರ್.ಎಸ್. ದೇಶಪಾಂಡೆ, ಡಿ.ಎಸ್. ಹೆಗಡೆ, ಮಂಜುನಾಥ ಹೆಗಡೆ, ಬಿ.ಬಿ. ಕಿಚಡಿ, ಟಿ.ಎಸ್. ಚೌಗಲೆ, ಎಸ್.ಎಂ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement