ಡಾ. ಸಂಗಮೇಶ ಸವದತ್ತಿಮಠ ಸವದತ್ತಿ ಸಮ್ಮೇಳನಾಧ್ಯಕ್ಷ
ಧಾರವಾಡ: ಸಂಶೋಧಕ, ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಅವರು ಜೂ. 20ರಂದು ನಡೆಯುವ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 78ಕ್ಕೂ ಅಧಿಕ ಕೃತಿಗಳನ್ನು ಹೊರತಂದಿರುವ ಇವರು 22 ಸಾವಿರ ವಚನಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡುವ ಮೂಲಕ ವರ್ಣನಾತ್ಮಕ ವಚನಪದಕೋಶ ರಚಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರಾಜ್ಯೋತ್ಸವ, ಇತರ ಪ್ರತಿಷ್ಠಿತ ಪ್ರಶಸ್ತಿಗಳು ಡಾ. ಸವದತ್ತಿಮಠ ಅವರಿಗೆ ಸಂದಿವೆ. ಜೂ. 20ರಂದು ಸವದತ್ತಿ ತಾಲೂಕಿನ ಯರಗಟ್ಟಿಯ ಶ್ರೀಮಹಾಂತ ದುರುದುಂಡೇಶ್ವರಮಠದ ಆವರಣದಲ್ಲಿ ಈ ಸಮ್ಮೇಳನ ಜರುಗಲಿದೆ.
ನೇತ್ರ ತಪಾಸಣಾ ಶಿಬಿರ ನಾಳೆ
ಹುಬ್ಬಳ್ಳಿ: ನಗರ ಸಿಮೆಂಟ್ ಚಾಳ ಸಹಾರಾ ಸ್ಪೋರ್ಟ್ಸ್ ಕ್ಲಬ್, ದಿವ್ಯಜ್ಯೋತಿ ಆಸ್ಪತ್ರೆ ಆಶ್ರಯದಲ್ಲಿ ಜೂ. 21ರಂದು ಸಿಮೆಂಟ್ ಚಾಳ ಸ್ಟೇಜ್ ಬಳಿ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಮಾಹಿತಿಗಾಗಿ 9481626072 ಸಂಪರ್ಕಿಸಲು ಡಾ. ಶ್ರೀಧರ ಅಮೀನ್ ಕೋರಿದ್ದಾರೆ.