ವಸಂತ ಹೊರಟ್ಟಿ ಆಯ್ಕೆ ಖಚಿತ: ಕೋನರಡ್ಡಿ
ಹುಬ್ಬಳ್ಳಿ: ಯುವಕರ ಅಗತ್ಯಗಳ ಅರಿತ ವಸಂತ ಹೊರಟ್ಟಿ ಆಯ್ಕೆ ಖಚಿತ. ಪಶ್ಚಿಮ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸಿದ ನಾಯಕರು ಪದವೀಧರರ ಸಮಸ್ಯೆಗೆ ಸ್ಪಂದಿಸಲೇ ಇಲ್ಲ. ಪರಿಷತ್ ಸದಸ್ಯರಾಗದೇ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ ವಸಂತ ಹೊರಟ್ಟಿಯವರನ್ನು ಆಯ್ಕೆ ಮಾಡಬೇಕಿದೆ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
ಧಾರವಾಡದ ಎಲ್ಆಯ್ಸಿ, ಟಿಸಿಡಬ್ಲ್ಯೂಗಳಲ್ಲಿ ವಸಂತ ಹೊರಟ್ಟಿ ಪರ ಮತಯಾಚಿಸಿ ಮಾತನಾಡಿದ ಅವರು, ಪ್ರಥಮ ಬಾರಿಗೆ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಯುವಕ ವಸಂತ ಹೊರಟ್ಟಿಯವರನ್ನು ಆಯ್ಕೆ ಮಾಡುವುದರ ಮೂಲಕ ಹೊಸ ಇತಿಹಾಸ ನಿರ್ಮಿಸೋಣ ಎಂದು ಹೇಳಿದರು.
ಪಕ್ಷದ ಚಿಹ್ನೆ, ಪಕ್ಷದ ನಾಯಕರ ಭಾವಚಿತ್ರ ಪ್ರದರ್ಶನ ಮಾಡಿ ಆಯ್ಕೆಯಾಗುವುದು ಕನಸಿನ ಮಾತು ಎಂದು ಲೇವಡಿ ಮಾಡಿದ ಅವರು, ಯಾವ ಹೋರಾಟವನ್ನ್ನೂ ಮಾಡದ ಸಂಕನೂರ ಅವರಿಗೆ ಹೊರಟ್ಟಿಯವರ ವಿರುದ್ದ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು. ವಸಂತ ಹೊರಟ್ಟಿ ಪರ ಪ್ರಚಾರದಲ್ಲಿ ಡಾ. ಶ್ರೀಶೈಲ್ ಹುದ್ದಾರ, ಆನಂದ ಕುಲಕರ್ಣಿ, ಎಂ.ಪಿ. ಭಟ್, ಶರಣು ಮುಷ್ಟಿಗೇರಿ, ನಾಗರಾಜ, ಮಂಜುನಾಥ ಕಳ್ಳಿಮನಿ ಇತರರು ಉಪಸ್ಥಿತರಿದ್ದರು.