ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧರ್ಮ ವಿಜಯರಥ ಯಾತ್ರೆ 23ಕ್ಕೆ ಆಗಮನ: ಸೀತಾರಾಮ

Lingaraj Badiger
Updated On : 21 Jun 2014, 11:16 am

ಧಾರವಾಡ: ಭಗವಾನ ವ್ಯಾಸಾಶ್ರಮ ಸ್ವರ್ಣ ಹಂಪಿ ಮಠ ಮತ್ತು ಶ್ರೀಶೈಲ ದೇವಸ್ಥಾನ ದೇವಾದಾಯ ಧರ್ಮದಾಯ ಇಲಾಖೆ ಜಂಟಿಯಾಗಿ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ, ಭ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿಯ ದಿವ್ಯ ಕಲ್ಯಾಣ ಮಹೋತ್ಸವದ ಧರ್ಮ ವಿಜಯರಥ ಯಾತ್ರೆ ಜೂ. 23ರಂದು ನಗರಕ್ಕೆ ಆಗಮಿಸಲಿದೆ ಎಂದು ಮುಖ್ಯ ಸಂಚಾಲಕ ಯು. ಸೀತಾರಾಮ ಶೆಟ್ಟಿ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ವಿಜಯರಥ ಯಾತ್ರೆಯು ನಾಡಿನ ವಿವಿಧ ನಗರಗಳಲ್ಲಿ ಸಂಚರಿಸಲಿದೆ. ಅದೇ ರೀತಿಯಲ್ಲಿ ಜೂ. 22ರಂದು ಹುಬ್ಬಳ್ಳಿಗೆ ಆಗಮಿಸಿ ನಂತರ ಹುಬ್ಬಳ್ಳಿ ಮಾರ್ಗವಾಗಿ ಜೂ. 23ರಂದು ಬೆಳಗ್ಗೆ 9.30 ಧಾರವಾಡಕ್ಕೆ ಆಗಮಿಸಲಿದೆ. ಬೆಳಗ್ಗೆ ಭಕ್ತರಿಂದ ಪೂರ್ಣಕುಂಭ ಹಾಗೂ ಮಂಗಳವಾದ್ಯಗಳೊಂದಿಗೆ ಶೋಭಾಯಾತ್ರೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮಧ್ಯಾಹ್ನ 12ಕ್ಕೆ ರಪಾಟಿ ಕಲ್ಯಾಣ ಮಂಟಪ ತಲುಪಲಿದೆ ಎಂದರು. ನಂತರ ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ 2 ರಿಂದ 4ವರೆಗೆ ಮಂಟಪ ಹಾಗೂ ಪೂಜಾ ವ್ಯವಸ್ಥೆ ಕಾರ್ಯ, ಸಂಜೆ 5ರಿಂದ 8ರ ವರೆಗೆ ಶ್ರೀಶೈಲ ಭ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಕಲ್ಯಾಣ ಮಹೋತ್ಸವ ಸಮಾರಂಭ ನಡೆಯಲಿದೆ. ರಾತ್ರಿ 8ರಿಂದ 9ರ ವರೆಗೆ ಅನುಗ್ರಹ ಸಂದೇಶ ಮತ್ತು ಪ್ರವಚನ, 9ರಿಂದ 9.30 ಕಾಣಿಕೆ ಅರ್ಪಣೆ, ನಂತರ ಮಹಾ ಪ್ರಸಾದ ವಿತರಣೆ ನಡೆಯಲಿದೆ. ಮರುದಿನ ಜೂ. 24ರಂದು ರಪಾಟಿ ಕಲ್ಯಾಣ ಮಂಟಪದಿಂದ ದಾಸನಕೊಪ್ಪ ಸರ್ಕಲ್ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಧರ್ಮವಿಜಯರಥ ಯಾತ್ರೆ ಸಂಚರಿಸಲಿದ್ದು, ಹೆಚ್ಚಿನ ಭಕ್ತರು ಭಾಗವಹಿಸಬೇಕೆಂದು ಹೇಳಿದರು. ಕಾರ್ಯಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿದರು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 8884618567 ಸಂಪರ್ಕಿಸಬೇಕು ಎಂದರು. ಡಾ. ಡಿ.ಎಂ. ಹಿರೇಮಠ, ಕೃಷ್ಣ ಕುಲಕರ್ಣಿ, ನಾಗರಾಜ ಗುರಿಕಾರ, ಆರ್.ಡಿ. ಕುಲಕರ್ಣಿ ಇದ್ದರು.
ಕಾರ್ಯಾಲಯ ಇಂದು ಆರಂಭ
ಧಾರವಾಡ: ನ್ಯಾಯವಾದಿ ಅರುಣ ಜೋಶಿ ಅವರ ನೂತನ ಕಚೇರಿ ಉದ್ಘಾಟನೆ ಜೂ. 21ರಂದು ಸಂಜೆ 5.30ಕ್ಕೆ ನಗರದ ಓಸ್ವಾಲ್ ಟಾವರ್ 3ನೇ ಮಹಡಿಯಲ್ಲಿ ನೆರವೇರಲಿದೆ. ಆರ್‌ಎಸ್ಸೆಸ್ ಪ್ರಮುಖ ಕಜ್ಜಂಪಾಡಿ ಸುಬ್ರಮಣ್ಯ ಭಟ್ಟ ಆಗಮಿಸಿ 'ನಮ್ಮ ಮನೆ-ನಮ್ಮ ಕುಟುಂಬ' ವಿಷಯದ ಕುರಿತು ಮಾತನಾಡಲಿದ್ದಾರೆ. ಅತಿಥಿಗಳಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಭಾಗವಹಿಸುತ್ತಾರೆ. ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ ಅಧ್ಯಕ್ಷತೆ ವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಶಾರದಾ ಜಿಂಗಾಡೆ ನಿಧನ
ಧಾರವಾಡ: ಹುಬ್ಬಳ್ಳಿಯ ರಾಧಾಕೃಷ್ಣ ನಗರದ ಶಾರದಾ ಶಿವಪ್ಪ ಜಿಂಗಾಡೆ (62)ಶುಕ್ರವಾರ ನಿಧನ ಹೊಂದಿದರು. ಮೃತರಿಗೆ ಪತಿ, ಒಬ್ಬ ಪುತ್ರ, ಬಂಧು-ಬಳಗವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement