ಹೊನ್ನಾವರ ತಾಪಂ ಅಧ್ಯಕ್ಷರಾಗಿ ನಾರ್ಣಪ್ಪ
ಹೊನ್ನಾವರ: ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ತಾಪಂನ ಮೂರನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆರವೇರುವ ತನಕ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಾರ್ಣಪ್ಪ ಗೌಡ ಕಡತೋಕಾ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ತಾಪಂ ಭವನದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದ ಹರ್ಷಿಣಿ ಚಂದ್ರಶೇಖರ ಗೌಡ ನಾರ್ಣಪ್ಪ ಗೌಡರಿಗೆ ಅಧಿಕಾರ ಹಸ್ತಾಂತರಿಸಿದರು. ತಾಪಂ ಸದಸ್ಯರಾದ ರಾಜು ನಾಯ್ಕ, ಜಯಂತಿ ನಾಯ್ಕ, ಸಾಧನಾ ನಾಯ್ಕ, ಲಕ್ಷ್ಮೀ ಗೊಂಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಡಿ. ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಮತ್ತಿತರರು ಹಾಜರಿದ್ದು ಮಾತನಾಡಿದರು.