ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾವ್ಯದ ಮೂಲಕ ಸಮಾಜ ಸುಧಾರಣೆ: ಸಿದ್ಧಲಿಂಗ ಪಟ್ಟಣಶೆಟ್ಟಿ

Lingaraj Badiger
Updated On : 23 Jun 2014, 10:45 am

ಧಾರವಾಡ: ಸಮಾಜ ಸುಧಾರಣೆಗೆ ಕಾವ್ಯವನ್ನು ಸಮರ್ಥವಾಗಿ ಬಳಸಿಕೊಂಡ ಕವಿ ರಾಮಚಂದ್ರರಾಯರು ಎಂದು ಡಾ೤ ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು. ಇಲ್ಲಿಯ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಮಿಂಚಿನ ಬಳ್ಳಿ ಗ್ರಂಥಮಾಲೆ ವತಿಯಿಂದ ನಡೆದ ದಿ. ಸಾಲಿ ರಾಮಚಂದ್ರರಾಯರ 'ಕನ್ನಡ ಮೇಘದೂತ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯ ಜೀವನವನ್ನು ಸಾಲಿಯವರು 1950ರ ಸುಮಾರಿಗೇ ಅನುವಾದಿಸಿದರು. ಅದನ್ನು ಯಾರಿಗೂ ತಿಳಿಸದ ಕಾರಣ ಅದನ್ನೋದುವ ಭಾಗ್ಯ ಸಿಕ್ಕಿರಲಿಲ್ಲ. ಈಗ ಅನುವಾದ ಎಲ್ಲರಿಗೂ ಸಿಗುವಂತಾಗಿದೆ ಎಂದರು. ಪಂ. ನರಸಿಂಹಾಚಾರ್ಯ ಜೋಶಿ ಮಾತನಾಡಿ, ಸಾಹಿತ್ಯದಲ್ಲಿ ಬೆಂದರೆ ಬೇಂದ್ರೆಯಾಗುತ್ತಾರೆ ಎಂದು ಸಾಲಿಯವರು ಯಾವಾಗಲೂ ಹೇಳುತ್ತಿದ್ದರು. ಸರಳತೆ, ಸಜ್ಜನಿಕೆ ಅವರ ಬದುಕಾಗಿತ್ತು. ಮನಸ್ಸು ತಳಮಳಗೊಂಡಾಗ ಮಾತ್ರ ಕಾವ್ಯ ರೂಪ ತಳೆಯುತ್ತದೆ ಎಂದರು. ವೆಂಕಟೇಶ ನರಸಿಂಹಾಚಾರ್ಯ ಜೋಶಿ, ಡಾ೤ ಎಂ.ಎಂ. ಜೋಶಿ, ಡಾ೤ ಎಂ.ಎಂ. ಕಲಬುರ್ಗಿ, ಪ್ರೊ೤ ಗಿರಡ್ಡಿ ಗೋವಿಂದರಾಜ, ಹೇಮಾ ಪಟ್ಟಣಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement