ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಾಜ್ಯದ ರೇಲ್ವೆ ಬೇಡಿಕೆಗಳ ಬಗ್ಗೆ ಸಂಸದ ಪ್ರಹ್ಲಾದ ಜೋಶಿ ಚರ್ಚೆ

Lingaraj Badiger
Updated On : 26 Jun 2014, 10:52 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 25
ನೈರುತ್ಯ ರೇಲ್ವೆ ವಲಯದ ಮಹಾಪ್ರಬಂಧಕ ಪಿ.ಕೆ. ಸಕ್ಸೇನಾ ಅವರನ್ನು ನಗರದಲ್ಲಿ ಬುಧವಾರ ಭೇಟಿ ಮಾಡಿದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ವಲಯದ ವ್ಯಾಪ್ತಿಯ ವಿವಿಧ ರೇಲ್ವೆ ಸೌಲಭ್ಯಗಳು ಹಾಗೂ ರಾಜ್ಯದ ಮತ್ತು ಧಾರವಾಡ ಲೋಕಸಭೆ ವ್ಯಾಪ್ತಿಯ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಿದರು.
ರಾಜ್ಯದ ಹಾಗೂ ಈ ಭಾಗದ ಹಲವಾರು ರೇಲ್ವೆ ಬೇಡಿಕೆಗಳ ಬಗ್ಗೆ ಕೇಂದ್ರ ರೇಲ್ವೆ ಸಚಿವರಿಗೆ ಸಲ್ಲಿಸಿದ 2014-15 ರ ಬಜೆಟ್ ಪೂರ್ವ ಪ್ರಸ್ತಾವನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿದ ಜೋಶಿ, ರೇಲ್ವೆ ಸಚಿವರು ಮುಂದಿನ ತಿಂಗಳು ಮಂಡಿಸುತ್ತಿರುವ ಬಜೆಟ್‌ನಲ್ಲಿ ಈ ಪ್ರಸ್ತಾವನೆಗಳನ್ನ್ನು ಆದಷ್ಟು ಹೆಚ್ಚಿನ ರೀತಿಯಲ್ಲಿ ಅಳವಡಿಸಲು ಸಚಿವರಿಗೆ ಅಧಿಕೃತವಾಗಿ ಪ್ರಸ್ತಾವನೆಗಳನ್ನ್ನು ಸಲ್ಲಿಸಲು ಮಹಾ ಪ್ರಬಂಧಕರಿಗೆ ಸೂಚಿಸಿದರು.
ರಾಜ್ಯಕ್ಕೆ ವಿವಿಧ ಸ್ಥಳಗಳಿಂದ ಆರಂಭಿಸಬೇಕಾದ ಹಲವಾರು ಹೊಸ ರೈಲುಗಳ ಪ್ರಸ್ತಾವನೆ, ಹೊಸ ಮಾರ್ಗಗಳ ಯೋಜನೆಗಳು, ಹುಬ್ಬಳ್ಳಿ-ಅಂಕೋಲಾ ಹೊಸಮಾರ್ಗ ಯೋಜನೆ, ಖಾಲಿ ಇರುವ ವಿವಿಧ ವರ್ಗಗಳ ಸಿಬ್ಬಂದಿ ನೇಮಕಾತಿ, ಪ್ರಸ್ತಾವಿತ ರೇಲ್ವೆ ಅಂಡರ್ ಬ್ರಿಜ್ ಹಾಗೂ ಓವರ್ ಬ್ರಿಜ್‌ಗಳ ನಿರ್ಮಾಣ, ವಿವಿಧ ಗ್ರೂಪ್ ಡಿ ವರ್ಗದ ಹುದ್ದೆಗಳಿಗೆ ನೇಮಕಾತಿ ಹೊಂದಿ ನೇಮಕಾತಿ ಆದೇಶಗಳಲ್ಲಿ ಆಗುತ್ತಿರುವ ವಿಳಂಬ, ಅಪ್ರೆಂಟಿಸ್ ಅಭ್ಯರ್ಥಿಗಳ ನೇಮಕಾತಿ, ಹುಬ್ಬಳ್ಳಿಯಿಂದ ವಿವಿಧ ಸ್ಥಳಗಳಿಗೆ ಆರಂಭವಾಗಬೇಕಾದ ಹೊಸ ರೈಲುಗಳು, ಹುಬ್ಬಳ್ಳಿ-ಮುಂಬೈ ಸಾಪ್ತಾಯಿಕ ರೈಲು, ಯಶವಂತಪುರ-ಚಂದಿಘಡ ಸಂಪರ್ಕ ಕ್ರಾಂತಿ ರೈಲುಗಳನ್ನ್ನು ಪ್ರತಿ ದಿನ ಓಡಿಸುವುದು, ಹುಬ್ಬಳ್ಳಿ-ಧಾರವಾಡ ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯ ಮತ್ತಿತರ ವಿಷಯಗಳ ಕುರಿತು ಜೋಶಿ ನೈಋತ್ಯ ರೇಲ್ವೆ ವಲಯದ ಮಹಾಪ್ರಬಂಧಕರೊಂದಿಗೆ ಚರ್ಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement