ಆತ್ಮೋನ್ನತಿಗಾಗಿ ಮಂತ್ರಾಲಯ ಪಾದಯಾತ್ರೆ ಶ್ರೇಷ್ಠ: ಪೇಜಾವರ ಶ್ರೀ
ಧಾರವಾಡ: ಆತ್ಮದ ಉನ್ನ್ನತಿಗೆ ಮಂತ್ರಾಲಯದ ಪಾದಯಾತ್ರೆ ಶ್ರೇಷ್ಠ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು.
ಇಲ್ಲಿನ ಮಾಳಮಡ್ಡಿಯ ವನವಾಸಿ ರಾಮಮಂದಿರದಲ್ಲಿ, ಸನ್ಯಾಸ ಆಶ್ರಮದ 75 ವರ್ಷಗಳನ್ನ್ನು ಪೂರೈಸಿದ ಹಿನ್ನೆಲೆಯಲ್ಲಿ ತುಲಾಭಾರ ಸ್ವೀಕರಿಸಿ ಮಾತನಾಡಿದ ಅವರು, ಮಂತ್ರಾಲಯದ ಪಾದಯಾತ್ರೆ ಎಂದರೆ ಗಂಗಾ ಯಾತ್ರೆಯಿದ್ದಂತೆ, ಗಂಗೆ ಹಿಮಾಲಯದಿಂದ ಹರಿದು ಕೊನೆಗೆ ಸಾಗರವನ್ನ್ನು ಸೇರಿ ಪಾವನವಾಗುವಂತೆ, ಭಕ್ತರು ನಡೆಸುವ ಪಾದಯಾತ್ರೆ ಮಂತ್ರಾಲಯದ ರಾಯರ ದರ್ಶನವಾಗುತ್ತಿದ್ದಂತೆ ಪಾವನಗೊಳ್ಳುತ್ತದೆ ಎಂದರು.
ಸಹಸ್ರ ಚಂದ್ರ ದರ್ಶನದ ನಿಮಿತ್ತ ವೈದ್ಯ ಬಾಬುರಾವ್ ಕುಲಕರ್ಣಿಯವರಿಗೆ ಮಠದ, ರಾಮ ವಿಠಲ ಪ್ರಶಸ್ತಿಯನ್ನು ವಿಶ್ವೇಶತೀರ್ಥರು ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ವೈದ್ಯ ಬಾಬುರಾವ್ ಕುಲಕರ್ಣಿ ಮಾತನಾಡಿ, ಸಹಸ್ರ ಚಂದ್ರ ದರ್ಶನದ ಶಾಂತಿ, ಲೋಕದ ಶಾಂತಿಗಾಗಿ ಮಾಡಿದ್ದೇನೆ. ಭಾರತೀಯ ಸಂಸ್ಕೃತಿ, ಆಧ್ಯಾತ್ಮ ಸತ್ಯವನ್ನ್ನು ಒಳಗೊಂಡಿದೆ ಎಂದರು. ಉದ್ಭವ ಗದಗಕರ, ಬಿ.ಎಸ್. ಶಶಿಕುಮಾರ, ಸುಮಾ ಮಳಗಿ, ಡಾ. ನಾರಾಯಣಾಚಾರ್ಯ ಧೂಳಖೇಡ್, ಜಯತೀರ್ಥಾಚಾರ್ಯ ಮಳಗಿ, ಗೋಪಾಲಾಚಾರ್ಯ ಹೊಂಬಳ, ಕೃಷ್ಣ ದೇಶಪಾಂಡೆ ಇದ್ದರು.