ಕುಡಿಯುವ ನೀರು ಪೂರೈಕೆ ಪೈಪ್‌ಲೈನ್‌ಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 3
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ. 39ರ ವ್ಯಾಪ್ತಿಯ ಆನಂದನಗರದ ಕುಷ್ಠರೋಗ ಆಸ್ಪತ್ರೆಯಲ್ಲಿ ರು. 80 ಲಕ್ಷ ವೆಚ್ಚದ ಕುಡಿಯುವ ನೀರು ಪೂರೈಕೆ ಪೈಪ್‌ಲೈನ್ ಕಾಮಗಾರಿಗೆ ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ ಮತ್ತು ಶಾಸಕ ಅರವಿಂದ ಬೆಲ್ಲದ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆಯನ್ನು ಈ ರು. 80 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಯೋಜನೆಯಿಂದ ಮಹಾನಂದಿ ಲೇಔಟ್, ಸಿದ್ಧರಾಮೇಶ್ವರ ನಗರ, ಬಾಪೂಜಿ ಕಾಲನಿ, ಮೇಘರಾಜ ನಗರ, ಬ್ಯಾಹಟ್ಟಿ ಪ್ಲಾಟ್, ಘೋಡಕೆ ಪ್ಲಾಟ್, ಸಾಲಿ ಪ್ಲಾಟ್, ಶಿಮ್ಲಾ ನಗರ 2ನೇ ಹಂತ, ಏಕತಾ ಕಾಲನಿ, ಆರೂಢ ನಗರ ನಿವಾಸಿಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದರು.
ನೀರು ಸರಬರಾಜು ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ರಾಜು, ಧಾರವಾಡ ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ ಪಾಲಿಕೆ, ಪಾಲಿಕೆ ಸದಸ್ಯೆ ದೀಪಾ ನಾಗರಾಜ ಗೌರಿ, ಕಿರಣ ಪಾಟೀಲ ಕುಲಕರ್ಣಿ, ರಾಮಣ್ಣ ಬಡಿಗೇರ, ಸತ್ತಾರ ಪಠಾಣ, ಅನ್ವರ ಟೇಲರ್, ಇಮ್ತಿಯಾಜ್ ನಾಯಿಕೊಡಿ, ಮಂಜು ಪೂಜಾರ, ಅಶೋಕ, ಕಿರಣ ಸುಗೂರ, ಉಪಸ್ಥಿತರಿದ್ದರು.