ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚಿಂತನೆ, ಸಂವೇದನೆಯಲ್ಲಿ ಕಾವ್ಯ ಮೂಡಲಿ

Mainashree
Updated On : 4 Mar 2014, 10:23 am

ಕನ್ನಡಪ್ರಭ  ವಾರ್ತೆ, ಧಾರವಾಡ, ಮಾ. 3
ಯುವಕವಿಗಳು ಸಮಾಜದ ಅಂತರಂಗದ ಆಳಕ್ಕಿಳಿದು,  ಸಮಾಜ ಬದಲಾವಣೆಯ  ಚಿಂತನೆಯೊಂದಿಗೆ ಸಂವೇದನಾತ್ಮಕವಾಗಿ ಕಾವ್ಯ ಮೂಡುವಂತೆ ರಚಿಸಬೇಕು ಎಂದು ನಾಡೋಜ ಚನ್ನ್ನವೀರ ಕಣವಿ ಹೇಳಿದರು.
ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ಏರ್ಪಡಿಸಿದ್ದ, ಯುವಕವಿ ಚೇತನ ಸೊಲಗಿ ಅವರ ಸಾಫ್ಟ್ ಜಗತ್ತಿನಲ್ಲಿ ಕೃತಿ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು,  ಕಾವ್ಯ ವಾಸ್ತವದ ನೆಲೆಗಟ್ಟಿನ ಮೇಲೆ, ತಿದ್ದಿ, ತೀಡಿ ಮಾಗಿದ ರೂಪ ಪಡೆಯಬೇಕು.
ಯುವ ಕವಿ ಸದಾ ಮನಸ್ಸಿನ ಪರದೆಯ ಒಳಗೂ ಹೊರಗೂ ಕಾವ್ಯದ ಕುರಿತ ಸನ್ಯಾಸಿಯಂತಾಗಬೇಕು. ಕವಿತೆ ಹುಟ್ಟಿಕೊಳ್ಳುವಾಗ ಸಮರ್ಥ ಸಂವಹನ ಪದಕ್ಕಾಗಿ ಮನ ಹಪಹಪಿಸುತ್ತಿರಬೇಕು. ಪ್ರತಿಮೆ ಬಳಸುವಾಗ ಮತ್ತೆ ಮತ್ತೆ ಯೋಚಿಸಿ ಬಳಸಬೇಕು. ಇಂದಿನ ಯುವಕವಿಗಳ ಕವಿತೆಗಳಲ್ಲಿ ಭರವಸೆಯ ಛಾಯೆ ಗೋಚರಿಸುತ್ತಿರುವುದು ಸಂತಸ ಎಂದರು.
ಕವಿ ಚನ್ನ್ನಪ್ಪ ಅಂಗಡಿ, ಯುವಕರು ಸಹ ಇಂದು ಸಾಹಿತ್ಯದ ಗೀಳು ಹಚ್ಚಿಕೊಂಡಿರುವುದು ಕನ್ನ್ನಡ ಮಾತೆಗೆ ಗರಿಮೆ ಬಂದಂತೆ, ಹೊಸಬನೊಬ್ಬನ ಕವಿತೆಗಳು ಇಷ್ಟೊಂದು ಪರಿಣಾಮಕಾರಿಯಾಗಿದ್ದು ಓದುಗರ ಗಮನ ಸೆಳೆಯಬಲ್ಲ ಶಕ್ತಿ ಹೊಂದಿವೆ. ಈ  ಯುವಕವಿ ಚೇತನ ಸೊಲಗಿ ಮಾಧ್ಯಮದ ವಿದ್ಯಾರ್ಥಿಯಾಗಿದ್ದು, ತನ್ನ್ನ ಕವಿತೆಗಳನ್ನ್ನು ಮರುವಿಮರ್ಶೆಯೊಂದಿಗೆ ಮುಂದಿನ ದಿನಮಾನಗಳಲ್ಲಿ  ಇದಕ್ಕಿಂತ ಅತ್ಯುತ್ತಮ ಬರಹವನ್ನ್ನು ನೀಡುವಂತಾಗಲಿ, ಈ ಸಾಫ್ಟ್ ಜಗತ್ತಿನಲ್ಲಿ ಕೃತಿಯ ಕವಿತೆಗಳು ಅಂತಹ ಭರವಸೆ ಮೂಡಿಸುತ್ತಿವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿ, ನಿರೂಪಿಸಿದರು. ಡಾ. ನಿಂಗು ಸೊಲಗಿ,  ಡಾ. ಶಿವಾನಂದ ಗಾಳಿ, ಬಸವರಾಜ ಸೂಳಿಭಾವಿ, ಎ.ಬಿ. ಹಿರೇಮಠ, ವೀರಣ್ಣ ಒಡ್ಡಿನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement