ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿವಿಧ ತರಬೇತಿ ಕಾರ್ಯಕ್ರಮ

Mainashree
Updated On : 4 Mar 2014, 10:20 am

ಹುಬ್ಬಳ್ಳಿ: ಇಲ್ಲಿನ ಅಪ್ಪಾರೆಲ್ ಟ್ರೈನಿಂಗ್ ಮತ್ತು ಡಿಸೈನ್ ಸೆಂಟರ್‌ನಿಂದ ಹಣಕಾಸು ಹಾಗೂ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂಗವಿಕಲ ನಿರುದ್ಯೋಗಿಗಳಿಗಾಗಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದೂವರೆ ತಿಂಗಳ ಸ್ಮಾರ್ಟ್ ಸ್ಯೂಯಿಂಗ್ ಆಪರೇಟರ್ ಅಡ್ವಾನ್ಸ್, ಒಂದು ತಿಂಗಳ ಸ್ಮಾರ್ಟ್ ಅರ್ನಮೆಂಟೆಷನ್ ಮತ್ತು ಒಂದು ತಿಂಗಳ ಸ್ಮಾರ್ಟ್ ಕ್ವಾಲಿಟಿ ಚೆಕ್ಕರ್ ಕುರಿತು ತರಬೇತಿ ನೀಡಲಾಗುವುದು. ತರಬೇತಿ ಉಚಿತವಾಗಿದ್ದು  ಅಭ್ಯರ್ಥಿಗಳು ಧಾರವಾಡ ಜಿಲ್ಲೆಯವರಾಗಿರಬೇಕು ಮತ್ತು 18-35 ವಯಸ್ಸಿನವರಾಗಿರಬೇಕು. ಕನಿಷ್ಠ 5ನೇ ತರಗತಿ ಪಾಸಾಗಿರಬೇಕು ಮತ್ತು ಅಂಗವೈಕಲ್ಯದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಅಪ್ಪಾರೆಲ್ ಟ್ರೈನಿಂಗ್ ಮತ್ತು ಡಿಸೈನ್ ಸೆಂಟರ್ ಎಟಿಐ ಕಂಪೌಂಡ್, ಕೆನರಾ ಹೊಟೇಲ್ ಹಿಂಭಾಗ, ಹೊಸೂರು ಹುಬ್ಬಳ್ಳಿ ಇಲ್ಲಿಗೆ ಖುದ್ದಾಗಿ ಎರಡು ಪ್ರತಿ ದೃಢಿಕೃತ ದಾಖಲೆಗಳು ಮತ್ತು ಇತ್ತೀಚಿನ 5  ಭಾವಚಿತ್ರಗಳೊಂದಿಗೆ ಮಾ. 10ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 0836-2271137ನ್ನು ಸಂಪರ್ಕಿಸಬಹುದು.
ಬುಡಕಟ್ಟು ಜಾತಿಗೆ ಸೇರ್ಪಡೆ: ಶ್ಲಾಘನೆ
ಹುಬ್ಬಳ್ಳಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ವಿಸ್ತೃತ ಅಧ್ಯಯ ವರದಿಯನ್ನಾಧರಿಸಿ ಅಂಬಿಗ ಸಮುದಾಯವನ್ನು ಬುಡಕಟ್ಟು ಜಾತಿಗೆ ಸೇರಿಸುವುದಕ್ಕೆ ರಾಜ್ಯ ಸರ್ಕಾರ ಮಾಡಿರುವ ಶಿಫಾರಸನ್ನು ಅಖಿಲ ಕರ್ನಾಟಕ ರಾಜ್ಯ ಅಂಬಿಗ (ಗಂಗಾಮತ) ಸಮಾಜ ಸಮಿತಿ ಸ್ವಾಗತಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಅಂಬಿಗ ಸಮಾಜದ ಕುಲಶಾಸ್ತ್ರೀಯ ಅಧ್ಯಯನದಲ್ಲಿ ಅಂಬಿಗ ಸಮುದಾಯವನ್ನು ಪ್ರತಿನಿಧಿಸುವ ಇಪ್ಪತ್ತೈದು ಪದಗಳನ್ನು ಆಧರಿಸಿ ಪರಿಶಿಷ್ಟ ಬುಡಕಟ್ಟು ಮೀಸಲಾತಿಗೆ ಶಿಫಾರಸು ಮಾಡಿರುವುದು ಸೂಕ್ತವಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಅಂಬಿಗ (ಗಂಗಾಮತ) ಸಮಾಜ ಸಮಿತಿ ರಾಜ್ಯಾಧ್ಯಕ್ಷ ಶಿವಶರಣ ಬಾರಕೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಧ್ಯಪ್ರದೇಶದ ಬುಡಕಟ್ಟು ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರಿಗೆ ಶೇ. 25ರಷ್ಟು ಮೀಸಲಾತಿ ಇರುವಂತೆ ರಾಜ್ಯದಲ್ಲಿ ನಿಯಮ ರೂಪಿಸಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ತನ್ನ ವಿಸ್ತೃತ ವರದಿಯಲ್ಲಿ ತಿಳಿಸಿದ್ದು, ಅದರನ್ವಯ ಶೇ. 8ರಷ್ಟು ಮೀಸಲಾತಿ ಸೌಲಭ್ಯವನ್ನು ಅಂಬಿಗ ಸಮಾಜಕ್ಕೆ ಕಲ್ಪಿಸಬೇಕು ಎಂದು ಬಾರಕೇರ ಹೇಳಿದ್ದಾರೆ.
ಜೀವನದಲ್ಲಿ ದೈವ ಭಕ್ತಿ ಬೇಕು
ಕಲಘಟಗಿ: ನಮ್ಮ ನಿತ್ಯಜಿವನದ ಕೆಲಸದ ಮಧ್ಯೆ ಹೆಚ್ಚಿನ ಸಮಯವನ್ನ್ನು ದೇವರ ನಾಮ ಸ್ಮರಣೆಗೆ ಮೀಸಲಿಡಬೇಕು ಎಂದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಇಂಚಲದ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿಯ ಸ್ವಾಮೀಜಿ ಹೇಳಿದರು. ತಾಲೂಕಿನ ಕಾಮಧೇನು ಗ್ರಾಮದ ಸಿದ್ಧಾರೂಡ ಮಠದಲ್ಲಿ ಆಯೋಜಿಸಿದ್ದ ಮೂರನೇ ವೇದಾಂತ್ ಪರಿಷತ್ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಹುಬ್ಬಳ್ಳಿಯ ಜಡಿಸಿದ್ಧೇಶ್ವರ ಮಠದ ಮುಕ್ತಾನಂದ ಸ್ವಾಮಿಗಳು, ಸಿದ್ಧಾರೂಢಮಠದ ಸಚ್ಚಿದಾನಂದ ಸ್ವಾಮಿಗಳು, ಹಂಪಿಯ ವಿದ್ಯಾನಂದ ಸ್ವಾಮೀಜಿ, ಜಿಪಂ ಅಧ್ಯಕ್ಷ ಎಸ್.ಸಿ ಅಗಡಿ, ವೈ.ಬಿ. ದಾಸನಕೊಪ್ಪ, ರೈತ ಧುರೀಣ ಎಸ್.ಎನ್. ಬನವಣ್ಣವರ, ಮೋಹನ ಬಡ್ನಿ,  ಈಶ್ವರ ಅಂಚಟಗೆರಿ, ಚಂದ್ರಗೌಡ ಪಾಟೀಲ, ಶಿವನಗೌಡ ಪಾಟೀಲ ಇದ್ದರು. ಬಿ.ಎಸ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.
ಕಲಘಟಗಿ: ಅವಿರೋಧ ಆಯ್ಕೆ
ಕಲಘಟಗಿ: ತಾಲೂಕಿನ ತಾವರಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ವೀರನಗೌಡ ಪಿ. ಪುಟ್ಟಪ್ಪನವರ ಹಾಗೂ ಉಪಾಧ್ಯಕ್ಷರಾಗಿ ಚನ್ನಬಸಪ್ಪ ಎನ್. ತಿಪ್ಪಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement