ಧಾರವಾಡ: ಮೋದಿ, ಜೋಶಿ ವಿಕಾಸವಾಹಿನಿಗೆ ಚಾಲನೆ
ಧಾರವಾಡ: ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರ ಸಾಧನೆ ಬಿಂಬಿಸುವ ವಿಕಾಸ ವಾಹಿನಿ ರಥಕ್ಕೆ ಎತ್ತಿನಗುಡ್ಡದಲ್ಲಿ ಬಿಜೆಪಿ ಮುಖಂಡ ಶಂಕರ ಹಾರಿಕೊಪ್ಪ ಚಾಲನೆ ನೀಡಿದರು.
ನಗರದ ಕುಮಾರೇಶ್ವರ ನಗರ ಕೆ.ಎಚ್.ಬಿ. ಕಾಲೋನಿ, ಸಂಪಿಗೆನಗರ ಹೆಡ್ಕ್ವಾರ್ಟರ್ಸ್ಗಳಲ್ಲಿ ಸಂಚರಿಸಿ ಮೋದಿ ಹಾಗೂ ಪ್ರಹ್ಲಾದ ಜೋಶಿ ಅವರ ಸಾಧನೆಗಳನ್ನ್ನು ಜನತೆಯ ಮುಂದೆ ತೆರೆದಿಡುವ ಕಾರ್ಯ ನಡೆಯಿತು.
ವಿಕಾಸವಾಹಿನಿಗೆ ಚಾಲನೆ ನೀಡಿದ ಶಂಕರ ಹಾರಿಕೊಪ್ಪ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯನ ಗುರಿಯಾಗಬೇಕು. ಅದಕ್ಕಾಗಿ ನಾವು ಪ್ರಹ್ಲಾದ ಜೋಶಿ ಅವರನ್ನು ಆಯ್ಕೆ ಮಾಡಬೇಕಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಭಾರತ ಸಮೃದ್ಧಿಯ ನಾಡಾಗುವುದರಲ್ಲಿ ಸಂಶಯವೇ ಇಲ್ಲ ಎಂದರು. ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ರುದ್ರಾಪುರ, ಪಾಲಿಕೆಯ ಮಾಜಿ ಸದಸ್ಯ ವೀರನಗೌಡ ಪಾಟೀಲ, ಸ್ಲಂ ಮೋರ್ಚಾ ಅಧ್ಯಕ್ಷ ಎಂ.ಬಿ. ನಡಟ್ಟಿ, ಈರಪ್ಪ ನೇಗಿನಗಾಳ, ಮಲ್ಲಿಕಾರ್ಜುನ ಪಾಟೀಲ, ಯಲ್ಲಪ್ಪ ಕೆಲಗೇರಿ, ಸುರೇಶ ವಕ್ಕುಂದ, ಉಳವಪ್ಪ ವಾಳದ, ಬಸವರಾಜ ಗೌಡರ, ಬಡೇಸಾಬ ಕುಂಬಾರಕೊಪ್ಪ, ಲಕ್ಷ್ಮಣ ಗರಗ, ರಾಜು ಹೀರೇಕುಂಬಿ, ರಾಜು ಕುರಬರ ಇದ್ದರು.