ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿವೃತ್ತಿ ವೇತನ ಕಾಯ್ದೆ ರದ್ದತಿಗೆ ಆಗ್ರಹ

Mainashree
Updated On : 7 Mar 2014, 10:37 am

ಧಾರವಾಡ: ನಿವೃತ್ತಿ ನಂತರ ಸರ್ಕಾರಿ ನೌಕರರ ವಿಶ್ರಾಂತ ಬದುಕಿಗೆ ಮಾರಕವಾಗಿರುವ 2013ರ ರಾಷ್ಟ್ರೀಯ ನಿವೃತ್ತಿ ವೇತನ ಕಾಯ್ದೆ ರದ್ದುಪಡಿಸಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕ ಆಗ್ರಹಿಸಿದೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಆಡಳಿತ ಸೇವೆ ಒದಗಿಸಲು ನೌಕರರಿಗೆ ಅಗತ್ಯ ರಕ್ಷಣೆ ಬೇಕಿದೆ. ಕೇಂದ್ರ ಸರ್ಕಾರದ ಮಾದರಿಯಂತೆ ರಾಜ್ಯ ಸರ್ಕಾರಿ ನೌಕರರಿಗೂ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ನೀಡುವುದು. ನೌಕರರ ವೈದ್ಯಕೀಯ ವೆಚ್ಚದ ಮರುಪಾವತಿ ವಿಳಂಬ ಹಾಗೂ ಸಂಕೀರ್ಣ ವ್ಯವಸ್ಥೆ ಸರಳೀಕರಣಗೊಳಿಸುವುದು. ಅಡುಗೆ ಅನಿಲದ ಮೇಲೆ ವಿಧಿಸಿರುವ ಮಿತಿ ತೆಗೆದು ಹಾಕುವುದು. ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಪಡಿಸುವುದು. ಗುತ್ತಿಗೆ ಮತ್ತು ಹೊರ ಗುತ್ತಿಗೆಯ ಪದ್ಧತಿ ಕೈಬಿಟ್ಟು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವವರನ್ನು ಈ ಕೂಡಲೇ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಡಿಸಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ಮನವಿ ಸ್ವೀಕರಿಸಿದರು. ರಾಮಚಂದ್ರ ಮುದಗಣ್ಣವರ, ಜಿ.ಜಿ. ಜಿನ್ನೂರ, ವಿ.ಆರ್. ನರಗುಂದ, ಗುರುಮೂರ್ತಿ ಯರಗಂಬಳಿಮಠ, ಮುರುಘೇಶ ಸವಣೂರ, ಮಂಜುನಾಥ ಹೆಗಡೆ, ಎಚ್.ಬಿ. ವಾದಿರಾಜ, ಜಿ.ಜೆ. ಪೋಳ, ಎಂ.ಜಿ. ಮರಚರಡ್ಡಿ, ಎ.ಎಸ್. ಪಾಟೀಲ, ಜಗದೀಶ ತಿರ್ಲಾಪುರ, ಚಿದಂಬರ ಕುಲಕರ್ಣಿ, ಪುರುಷೋತ್ತಮ, ತಿಪ್ಪಣ್ಣ ಕೊಣ್ಣೂರ, ಶರಣಪ್ಪ ಬೆಟಗೇರಿ, ದಯಾನಂದ ಮಾಳಗಿಮನಿ, ಶ್ರೀಪಾದ ಹುದ್ದಾರ, ಜಿ.ಐ. ಗಣಾಚಾರಿ, ಎಂ.ಬಿ. ಕಾಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement