ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪರೀಕ್ಷೆ ಶುಲ್ಕ ವಿನಾಯಿತಿಗಾಗಿ ಪ್ರತಿಭಟನೆ

Rashmi Kasaragodu
Updated On : 8 Mar 2014, 12:10 pm

ಧಾರವಾಡ:  ಶುಲ್ಕ ವಿನಾಯತಿ ಇಲ್ಲದೇ ಸಂಪೂರ್ಣ ಪರೀಕ್ಷೆ ಶುಲ್ಕವನ್ನು ಭರಿಸಬೇಕು ಎನ್ನುವ ಕಾಲೇಜಿನ ನಿರ್ಧಾರದ ವಿರುದ್ಧ ಎಐಡಿಎಸ್ಓ ಹಾಗೂ ಎಐಡಿವೈಓ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಸಂಘಟನೆ ಮುಖಂಡರೊಂದಿಗೆ ಪ್ರಾಚಾರ್ಯರು ಮಾತುಕತೆ ನಡೆಸಿದರು. ನಗರದ ಬಹುತೇಕ ಪದವಿ ಕಾಲೇಜುಗಳಲ್ಲಿ ಶುಲ್ಕ ವಿನಾಯತಿ ನೀಡಿದ್ದು ಆದರೆ, ಈ ಕಾಲೇಜಿನಲ್ಲಿ ಮಾತ್ರ ಸಂಪೂರ್ಣ ಶುಲ್ಕ ಪಡೆಯಲಾಗುತ್ತಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ನಂತರ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಬಳಿಗೆ ತೆರಳಿದರು. ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ, ಪ್ರಾಚಾರ್ಯರು ಮತ್ತು ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸುಮಾರು ಹೊತ್ತು ಚರ್ಚಿಸಿದ ನಂತರ ವಿದ್ಯಾರ್ಥಿಗಳ ಬೇಡಿಕೆ ಮನ್ನಿಸಿ ಶುಲ್ಕ ವಿನಾಯತಿ ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement