ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಿವು ಹಿರೇಮಠ ಹು-ಧಾ ನೂತನ ಮೇಯರ್

Vishwanath S
Updated On : 8 Mar 2014, 12:44 pm

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿಯ ಶಿವು ಹಿರೇಮಠ್, ಉಪ ಮೇಯರ್ ಆಗಿ ಮಂಜುಳಾ ಅಕ್ಕೂರ್ ಆಯ್ಕೆಯಾದರು.
ಈ ಎರಡು ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಜೆಡಿಎಸ್ ಬೆಂಬಲ ಪಡೆದ ಬಿಜೆಪಿ ಅಭ್ಯರ್ಥಿ ಹಿರೇಮಠರಿಗೆ 46 ಮತಗಳು ಲಭಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ 28 ಮತಗಳನ್ನು ಪಡೆದರು. ಉಪ ಮೇಯರ್ ಸ್ಥಾನ ಅನುಸೂಚಿತ ಪಂಗಡದ ಮಹಿಳೆಗೆ ಮೀಸಲಾಗಿದ್ದು, ಈ ಮೀಸಲಾತಿಯಿಂದ ಬಿಜೆಪಿಯ ಮಂಜುಳಾ ಅಕ್ಕೂರ ಅವರೊಬ್ಬರೇ ಒಬ್ಬರೆ ಅಭ್ಯರ್ಥಿಯಾಗಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಮೇಯರ್ ಸ್ಥಾನಕ್ಕೆ ಧಾರವಾಡದ 17ನೇ ವಾರ್ಡಿನ ಶಿವು ಹಿರೇಮಠ್ ಆಯ್ಕೆಯಾದರು. ಕೈ ಎತ್ತುವ ಮೂಲಕ ಹಾಗೂ ನೋಂದಣಿ ಪುಸ್ತಕದಲ್ಲಿ ಸಹಿ ಮಾಡುವ ಮೂಲಕ ಮತದಾನ ನಡೆಯಿತು. ಮತದಾನದಲ್ಲಿ ಜೆಡಿಎಸ್ ಸದಸ್ಯರಾದ ಧಾರವಾಡದ ವಾರ್ಡ್ ಸಂಖ್ಯೆ 11ರ ಖಾತುನಬಿ ತಮಾಟಗಾರ ಮತ ಚಲಾಯಿಸದೇ ತಟಸ್ಥವಾಗಿದ್ದರೆ, ವಾರ್ಡ್ ಸಂಖ್ಯೆ 51ರ ತಬಸ್ಸೂಮ ಮನಿಯಾರ ಗೈರಾಗಿದ್ದರು. 33 ಸಂಖ್ಯಾಬಲ ಹೊಂದಿದ್ದ ಬಿಜೆಪಿಗೆ ಜೆಡಿಎಸ್ ಸದಸ್ಯರ 7 ಮತಗಳು, ಒಬ್ಬ ಪಕ್ಷೇತರ ಅಭ್ಯರ್ಥಿ, ಒಬ್ಬ ಕೆಜೆಪಿ ಅಭ್ಯರ್ಥಿ, ಬಿಜೆಪಿ ಶಾಸಕರಾದ ಜಗದೀಶ್ ಶೆಟ್ಟರ್, ಅರವಿಂದ ಬೆಲ್ಲದ, ಬಿಜೆಪಿ ಸಂಸದ ಪ್ರಹ್ಲಾದ ಜೋಶಿ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರ ಮತಗಳು ಲಭಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement