ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಾರದಾ ಭಜನಾ ಮಂಡಳ ವಾರ್ಷಿಕೋತ್ಸವ

Lingaraj Badiger
Updated On : 9 Mar 2014, 11:12 am

ಧಾರವಾಡ: ಇಲ್ಲಿಯ ಮಾಳಮಡ್ಡಿ ಶಾರದಾ ಭಜನಾ ಮಂಡಳದ ವಾರ್ಷಿಕೋತ್ಸವ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಡಾ. ಸೌಭಾಗ್ಯ ಕುಲಕರ್ಣಿ, ಸದೃಢ ಆರೋಗ್ಯಕ್ಕೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಹಿಳೆಯರು ಆತ್ಮಸ್ಥೈರ್ಯ ತಂದುಕೊಳ್ಳಬೇಕೆಂದರು.  ವತ್ಸಲಾ ಕುಲಕರ್ಣಿ ಮಾತನಾಡಿದರು. ನೂತನ ಮಹಾಪೌರ ಶಿವು ಹಿರೇಮಠ, ಉಪಮಹಾಪೌರ ಮಂಜುಳಾ ಅಕ್ಕೂರ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಂದ ಕೋಲಾಟ, ಕವ್ವಾಲಿ, ಕೊರವಂಜಿ ನೃತ್ಯ, ಭಾವಗೀತೆ ನಡೆದವು. ಅರವಿಂದ ಏಗನಗೌಡ್ರ, ಸುನೀಲ ಮೋರೆ, ಬಸವರಾಜ ರುದ್ರಪುರ, ಮಂಜುನಾಥ ನಡಟ್ಟಿ, ಕುಮಾರ ಕಾಗಿನೆಲೆ, ರಾಜು ಪಳೋಟಿ, ದೇವಾ ಪವಾರ, ಎಂ. ಬಸಣ್ಣ, ಮಹಾಂತೇಶ ಬಿಕ್ಕಣ್ಣವರ, ಆಶ್ರಿತ ಜಯಶ್ರೀ, ಜಯಶ್ರೀ ಕುರ್ತಕೋಟಿ, ವತ್ಸಲಾ ಕುಲಕರ್ಣಿ, ಸುಮಿತ್ರಾ ಕುಲಕರ್ಣಿ, ಪುಷ್ಪಾ ಗೋಡಖಿಂಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement