ಶಾಂತಿಯಿಂದ ಹೋಳಿ ಆಚರಿಸಿ
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿನ ಜನತೆ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಮೇಯರ್ ಶಿವು ಹಿರೇಮಠ ಮನವಿ ಮಾಡಿದ್ದಾರೆ.
ಹಿಂದಿನಿಂದಲೂ ಅವಳಿ ನಗರಗಳ ಜನತೆ ಎಲ್ಲ ಧರ್ಮಗಳ ಹಬ್ಬಗಳನ್ನು ನಾಡ ಹಬ್ಬದಂತೆ ಶಾಂತಿ, ಸೌಹಾರ್ದತೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು ಪರೀಕ್ಷೆ ತಯಾರಿಯಲ್ಲಿರುವ ವಿದ್ಯಾರ್ಥಿಗಳಿಗೆ ನಾಗರಿಕರು ಹಬ್ಬದ ಹೆಸರಿನಲ್ಲಿ ಶಬ್ದ ಮಾಲಿನ್ಯ ಮಾಡಿ ತೊಂದರೆ ಮಾಡಬಾರದು. ಮತ್ತು ಹಬ್ಬದ ಸಮಯದಲ್ಲಿ ಅಪಾಯಕಾರಿ ಬಣ್ಣಗಳನ್ನು ಮುಗ್ಧ ಜನರ ಹಾಗೂ ಮಹಿಳೆಯರ ಮೇಲೆ ಎರಚಿ, ಗಲಾಟೆ ಮಾಡುವುದಾಗಲಿ, ವಾಯು ಮಾಲಿನ್ಯ ಹೆಚ್ಚಿಸುವದಾಗಲಿ ಮಾಡಬಾರದು. ಹಬ್ಬದ ಸಮಯದಲ್ಲಿ ನಾಗರಿಕರ ಯೋಗಕ್ಷೇವುಕ್ಕೆ ದಿನವಿಡೀ ಶಾಂತಿ ಕಾಪಾಡುವಲ್ಲಿ ಶ್ರಮಿಸುವ ಪೊಲೀಸ್ ಸಿಬ್ಬಂದಿ ಮತ್ತು ಸಮಾಜಸೇವಾ ಸಂಘಸಂಸ್ಥೆಗಳ ಜೊತೆಗೆ ಸಹಕರಿಸಬೇಕು ಎಂದರು.