ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆದಿ ಶಂಕರರಿಂದ ಪಾರಮಾರ್ಥಿಕದ ಸ್ಪಷ್ಟ ವಿವರಣೆ

Lingaraj Badiger
Updated On : 16 Mar 2014, 11:58 am

ಹುಬ್ಬಳ್ಳಿ: ಹುಟ್ಟು ಸಾವುಗಳಿಂದ ಮೋಕ್ಷ ನೀಡು ಎಂದು ಭಕ್ತರು ದೇವರನ್ನು ಕೇಳಿಕೊಳ್ಳುತ್ತಾರೆ. ಮೋಕ್ಷ ಎಂದು ಸಾಮಾನ್ಯವಾಗಿ ಕರೆಯುವ ಈ ಪಾರಮಾರ್ಥಿಕ ಚಿಂತನೆಯನ್ನು ಆದಿ ಶಂಕರಾಚಾರ್ಯರು ತಮ್ಮ ಕೃತಿಗಳಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಭಾರತಿ ತೀರ್ಥ ಶ್ರೀಗಳು ಹೇಳಿದರು.
ಶನಿವಾರ, ಇಲ್ಲಿನ ಶಾರದಾ ಪೀಠಮ್‌ನಲ್ಲಿ ಜರುಗಿದ ಪ್ರವಚನದ ಸಾನ್ನಿಧ್ಯ ವಹಿಸಿದ್ದ ಅವರು, ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ಉಪನಿಷತ್‌ಗಳಲ್ಲಿ ವ್ಯಕ್ತವಾಗಿರುವ ಬ್ರಹ್ಮತತ್ವ ಸಿದ್ಧಾಂತವನ್ನು ಆದಿ ಶಂಕರರು ತಮ್ಮ ಕೃತಿಗಳಲ್ಲಿ ವಿವರಿಸಿದ್ದು, ಅವರ ಕೃತಿಗಳಲ್ಲಿ ವ್ಯಕ್ತವಾಗಿರುವ ಬ್ರಹ್ಮತತ್ವ ಸಿದ್ಧಾಂತದಲ್ಲಿ ಯಾವುದೇ ವಿರೋಧಾಭಾಸಗಳಿಲ್ಲ ಎಂದು ಹೇಳಿದರು.
ದೇಶದಲ್ಲಿ ಸನಾತನ ಧರ್ಮ ಕ್ಷೀಣಿಸುತ್ತಿದ್ದ ವೇಳೆ ದೇವರೇ ಶಂಕರರ ರೂಪದಲ್ಲಿ ಅವತರಿಸಿ ಸನಾತನ ಧರ್ಮವನ್ನು ಉದ್ಧರಿಸಿದ್ದಾರೆ. ಹುಟ್ಟು ಸಾವುಗಳಿಂದ ಮುಕ್ತಿ ಪಡೆಯುವುದಕ್ಕೆ ವೇದಾಂತ ಜ್ಞಾನ ಅತ್ಯಗತ್ಯವಾಗಿದ್ದು, ಈ ಜ್ಞಾನ ಪಡೆಯುವ ಮಾರ್ಗವನ್ನು ಆದಿ ಶಂಕರಾಚಾರ್ಯರು ಧರ್ಮೋಪಾಸನೆಯ ವಿಧಾನ ಮತ್ತು ಜ್ಞಾನ ಸಂಪಾದನೆಯ ಮುಖಾಂತರ ತಮ್ಮ ಕೃತಿಗಳಲ್ಲಿ ಹೇಳಿದ್ದಾರೆ ಎಂದು ಹೇಳಿದರು.
ಶಾರದಾ ಪೀಠಮ್‌ನಲ್ಲಿ ನಡೆದ ಪ್ರವಚನ ಕಾರ್ಯಕ್ರಮಕ್ಕೆ ಆಗಮಸಿದ್ದ ನೂತನ ಮೇಯರ್ ಶಿವು ಹಿರೇಮಠ ಅವರನ್ನು ಭಾರತಿ ತೀರ್ಥ ಶ್ರೀಪಾದಂಗಳವರು ಆಶೀರ್ವದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement