ಕನ್ನಡ ಸಾಹಿತ್ಯ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ: ಸುಬಾನಿ ಹುಕ್ಕೇರಿ
ಧಾರವಾಡ: ಸಾಹಿತ್ಯ ಸೃಜಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಪತ್ರಕರ್ತ ಸುಬಾನಿ ಹುಕ್ಕೇರಿ ಹೇಳಿದರು.
ವಿದ್ಯಾವರ್ಧಕ ಸಂಘದಿಂದ ಏರ್ಪಡಿಸಿದ್ದ ಶಾಂತಕವಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಅಂದು-ಇಂದು ವಿಷಯ ಕುರಿತು ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಸ್ತುತ ದಿನಮಾನದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ನಾವು ಮುಂದುವರೆಯಲು ಸಾಧ್ಯ ಎನ್ನುವ ಭಾವನೆ ದೂರವಾಗಬೇಕಾಗಿದೆ ಎಂದರು.
ಸಂಘದ ಕಾರ್ಯಾಧ್ಯಕ್ಷ ಪ್ರೊ. ಬಿ.ವಿ. ಗುಂಜೆಟ್ಟಿ, ಸುಬಾನಿ ಹುಕ್ಕೇರಿ ಸಮಗ್ರ ಕನ್ನಡ ಸಾಹಿತ್ಯದ ಚಿತ್ರಣವನ್ನು ಉಪನ್ಯಾಸದ ಮೂಲಕ ವ್ಯಕ್ತಪಡಿಸಿದ್ದು, ಕನ್ನಡ ಸಾಹಿತ್ಯ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರು ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ ನಿರೂಪಿಸಿ, ವಂದಿಸಿದರು.
ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಎಂ. ಬಿ. ಹೆಗ್ಗೇರಿ, ವೀರಣ್ಣ ಒಡ್ಡಿನ್ ಇದ್ದರು.