ಶಾರ್ಟ್ ಸರ್ಕ್ಯೂಟ್ಗೆ ಮೇವು ಭಸ್ಮ
ಉಪ್ಪಿನ ಬೆಟಗೇರಿ: ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ವೊಂದಕ್ಕೆ ವಿದ್ಯುತ್ ತಂತಿ ತಗುಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ಗೆ ಟ್ರ್ಯಾಕ್ಟರ್ನಲ್ಲಿದ್ದ ಮೇವು ಬೆಂಕಿಗೆ ಆಹುತಿಯಾಗಿದೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಬಳಿ ಜಾನುವಾರಿಗೆಂದು ಖರೀದಿಸಿದ್ದ ಮೇವನ್ನು ಟ್ರ್ಯಾಕ್ಟರ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ದೊಡವಾಡ ಗ್ರಾಮದ ರೈತ ಮಲ್ಲಪ್ಪ ಯರಿಕಿತ್ತೂರ ಎಂಬಾತ ಸಮೀಪದ ಮರೇವಾಡದಿಂದ ತನ್ನ ಗ್ರಾಮಕ್ಕೆ ಸುಮಾರು 25 ಸಾವಿರ ಮೌಲ್ಯದ ಮೇವನ್ನು ಟ್ರ್ಯಾಕ್ಟರ್ನಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಉಪ್ಪಿನ ಬೆಟಗೇರಿಯ ಬಳಿ ತಂತಿಗೆ ಮೇವು ತಗುಲಿ ಮೇವು ಸುಟ್ಟು ಕರಕಲಾಗಿದೆ. ಆದರೆ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ.
--