ಸ್ನೇಹ-ಸಂಪರ್ಕ ವಾರ್ಷಿಕ ಸಂಚಿಕೆ ಬಿಡುಗಡೆ
ಹುಬ್ಬಳ್ಳಿ: ಇಲ್ಲಿನ ವಿನೋದಕುಮಾರ್ ಗುಂಜಾಳ ಬಳಗದ ಪ್ರಕಟಿಸುವ ಸ್ನೇಹ-ಸಂಪರ್ಕ ಸಾಹಿತ್ಯ ಸಂಚಿಕೆಯ 14ನ ವಾರ್ಷಿಕೋತ್ಸವ ಸಂಚಿಕೆಯನ್ನು ಈಚೆಗೆ ಬಿಡುಗಡೆಗೊಳಿಸಲಾಯಿತು.
ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದ ಹಾಸ್ಯ ನಟ ಮಲ್ಲಯ್ಯ ಮಠಪತಿ, ಸಾಹಿತ್ಯಕ್ಕೆ ಮೀಸಲಾಗಿರುವ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ವಿನೋದಕುಮಾರ ಗುಂಜಾಳ ಬಳಗ ಹೊರತರುತ್ತಿರುವ ಸ್ನೇಹ-ಸಂಪರ್ಕ ಸಂಚಿಕೆ ಉದಯೋನ್ಮುಖ ಸಾಹಿತಿಗಳಿಗೆ, ಲೇಖಕರಿಗೆ ಪ್ರೋತ್ಸಾಹ ನೀಡುವ ವೇದಿಕೆಯಾಗಿದೆ ಎಂದು ಹೇಳಿದರು.
ಮಹಾಲಕ್ಷ್ಮಿ ಸಿನಿ ಕ್ರಿಯೆಷನ್ಸ್ ಮುಖ್ಯಸ್ಥ ಬಸವರಾಜ ನಂದಗಡ, ವಿದ್ಯುನ್ಮಾನ ಮಾಧ್ಯಮ ಎಷ್ಟೇ ಮುಂದುವರಿದರೂ ಸಾಹಿತ್ಯ ಕ್ಷೇತ್ರಕ್ಕೆ ಮುದ್ರಣವೇ ಪ್ರಮುಖ ಆಧಾರವಾಗಿದೆ ಎಂದು ಹೇಳಿದರು. ಯುವ ಸಾಹಿತಿ ಚಿತ್ರ ನಿರ್ದೇಶಕ ಪ್ರಕಾಶ ಕಮ್ಮಾರ ಮಾತನಾಡಿದರು. ಸಂಚಿಕೆಯ ಪ್ರಧಾನ ಸಂಪಾದಕ ವಿನೋದಕುಮಾರ ಗುಂಜಾಳ, ಸ್ನೇಹಿತರ ಆಸಕ್ತ ಬರಹಗಾರರ ಸಹಕಾರ ದೊರೆತಲ್ಲಿ ಪುಸ್ತಕ ಪ್ರಕಟಣೆ ಅಭಿಲಾಷೆ ಇದೆ ಎಂದು ತಿಳಿಸಿದರು. ವಾಮನ ಭಾಂಡಗೆ, ರಘು ರೋಗಿ, ವಿಜಯಕುಮಾರ ನೆವನೂರ ಇದ್ದರು.