ಚುನಾವಣಾ ಕಣಕ್ಕೆ ಗ್ರೌಂಡ್ ಬಚಾವೋ
ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನಕ್ಕೆ ಹೋರಾಟ ಮಾಡಿದ ಗ್ರೌಂಡ್ ಬಚಾವೋ ಸಮಿತಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಮಿತಿಯ ಓರ್ವ ಸದಸ್ಯರನ್ನು ಕಣಕ್ಕೆ ಇಳಿಸಲಾಗುವುದು ಎಂದು ಸಮಿತಿ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿದ ಗ್ರೌಂಡ್ ಬಚಾವೋ ಸಮಿತಿ, ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗ್ಡೆ, ಆಮ್ ಆದ್ಮಿ ಪಾರ್ಟಿಯ ಶೈಲೇಂದ್ರಕುಮಾರ್ ಪಾಟೀಲ, ವೆಂಕಟೇಶ ಸವದತ್ತಿ ಇಲ್ಲವೇ ರಮೇಶ ಬದನೂರ ಅವರನ್ನು ಧಾರವಾಡ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಗ್ರೌಂಡ್ ಬಚಾವೋ ಸಮಿತಿಯ ಮನೋಜ್ ಹಾನಗಲ್ ತಿಳಿಸಿದ್ದಾರೆ.
--