ಲೋಕಸಭಾ ಚುನಾವಣೆ: ಅಧಿಕಾರಿಗಳ ನೇಮಕ
ಹಾವೇರಿ: ಲೋಕಸಭಾ ಚುನಾವಣೆ ನಿಮಿತ್ತ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ತಾಲೂಕು ಮಟ್ಟದಲ್ಲಿ ಫ್ಲಾಯಿಂಗ್ ಸ್ಕ್ವಾಡ್ ತಂಡ ರಚಿಸಿ, ಅಧಿಕಾರಿಗಳ ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಾನಗಲ್ಲ ತಾಲೂಕಿಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ. ಲೋಕಾಪುರ (9739788642), ಶಿಗ್ಗಾಂವ-ಸವಣೂರ ತಾಲೂಕಿಗೆ ಜಂಟಿ ನಿರ್ದೇಶಕರ ಕಚೇರಿ ಸಹಾಯಕ ನಿರ್ದೇಶಕ ಪ್ರಸನ್ನಕುಮಾರ (9008429345), ಹಾವೇರಿ ತಾಲೂಕಿಗೆ ಉಪಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಎ.ಬಿ. ಮಾರಪ್ಪನವರ (9448636412), ಬ್ಯಾಡಗಿ ತಾಲೂಕಿಗೆ ಕರ್ನಾಟಕ ಗೃಹ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸೈಯದ್ (9845613041), ಹಿರೇಕೆರೂರು ತಾಲೂಕಿಗೆ ದೇವಿಹೊಸೂರ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕಿ ಎಂ.ಆರ್. ಹಂಸವೇಣಿ, ರಾಣಿಬೆನ್ನೂರು ತಾಲೂಕಿಗೆ ಉಪಅರಣ್ಯ ಸಂರಕ್ಷಣಾಧಿಕಾರಿಗಳ (ಸಾಮಾಜಿಕ)ನ್ನು ನೇಮಕ ಮಾಡಲಾಗಿದೆ ಅವರು ತಿಳಿಸಿದ್ದಾರೆ.