ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಂಪನ್ಮೂಲ ನಿರ್ವಹಣೆ ಕಾರ್ಯಾಗಾರಕ್ಕೆ ಚಾಲನೆ

Lingaraj Badiger
Updated On : 19 Mar 2014, 12:27 pm

ಧಾರವಾಡ: ಇಲ್ಲಿಯ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಭೂಮಾಹಿತಿ ತಂತ್ರಜ್ಞಾನದ ಬಳಕೆ ವಿಷಯದ ಕುರಿತು ಒಂಭತ್ತು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ಇಸ್ರೋದ ವಿಶ್ರಾಂತ ನಿರ್ದೇಶಕ ಡಾ. ಶ್ರೀನಿವಾಸ ಅಡಿಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ವೈವಿಧ್ಯಮಯ ಸಂಪನ್ಮೂಲಗಳಿದ್ದು, ಅವುಗಳ ಸದ್ಬಳಕೆಗೆ ಮತ್ತು ಹೊಸ ಸಂಪನ್ಮೂಲಗಳ ಶೋಧನೆ ಹಾಗೂ ರಕ್ಷಣೆಗಾಗಿ ನುರಿತ ತಜ್ಞರ ಅಗತ್ಯವಿದೆ. ಅದನ್ನು ಉಪಗ್ರಹ ಚಿತ್ರಗಳ ಬಳಕೆಯಿಂದ ಇವು ಸಾಧ್ಯವಿರುವುದಾಗಿಯೂ, ಉಪಗ್ರಹ ಚಿತ್ರ ಬಳಕೆ ಮತ್ತು ವಿಶ್ಲೇಷಣೆಗೆ ಸಾಫ್ಟ್‌ವೇರ್ ಅಗತ್ಯವಿದೆ ಹಾಗೂ ಈ ದಿಶೆಯಲ್ಲಿ ತಜ್ಞರ ಪಡೆ ತಯಾರಿಸಲು ತರಬೇತಿಯ ಅಗತ್ಯವಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಮೋಹನ ಕುಮಾರ ಮಾತನಾಡಿ, ಪೂರ್ವಜರು ಭೂಮಿಯನ್ನು ತಾಯಿಯೆಂದು ಗೌರವಿಸುತ್ತಿದ್ದರು. ಆದರೆ ಇಂದು ನಾವು ಭೂಮಿ ಕೇವಲ ಸಂಪತ್ತು ಒದಗಿಸುವ ಸಾಧನ ಎಂದು ತಿಳಿದು ಅದರ ಬಳಸುತ್ತಿದ್ದೇವೆ.
ಈ ವಿಚಾರದಲ್ಲಿ ಸಂಪತ್ತಿನ ಬಳಕೆಯಾದರೆ ಮುಂದೊಂದು ದಿನ ಸಂಪತ್ತಿನ ಕೊರತೆಯಾಗಿ ಇಡೀ ಮಾನವ ಜನಾಂಗ ಆಪತ್ತು ಎದುರಿಸಬೇಕಾಗಬಹುದು ಎಂದರು.
ಡಾ. ಶ್ರೀಕಾಂತ, ಲೋಕೇಶ್ವರಿ ನವಲಗುಂದ, ಡಾ. ವಿ.ಎಸ್. ಹೆಗಡೆ,  ಜಿನೇಂದ್ರ ಪ್ರಸಾದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement