ಹಣದಾಸೆಗೆ ಯುವಕನ ಅಪಹರಣ
ಹುಬ್ಬಳ್ಳಿ: ಹಣ ಸುಲಿಗೆ ಮಾಡುವ ಉದ್ದೇಶದಿಂದ ಭವಾನಿ ನಗರದ ಯುವಕನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಮನಬಂದಂತೆ ಥಳಿಸಿ, ಜೀವ ಬೆದರಿಕೆ ಹಾಕಿರುವ ಕುರಿತು ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭವಾನಿ ನಗರದ ಗಗನ ಜಯರಾಮ ಶೆಟ್ಟಿ ಎಂಬ ಯುವಕನನ್ನು ಇಲ್ಲಿನ ಮಧುರಾ ಕಾಲನಿ ಬಳಿ ಸ್ನೇಹಿತನ ಮನೆಯಿಂದ ಹಿಂದಿರುಗುತ್ತಿದ್ದ ವೇಳೆ ಸುಮಾರು 18-20 ವರ್ಷ ವಯಸ್ಸಿನ ಮೂವರು ಅಪರಿಚಿತ ಯುವಕರು ಅಡ್ಡಗಟ್ಟಿ ವಾಹನದಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.
ಹಣ ನೀಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಮನೆಗೆ ಕಳುಹಿಸಿದ್ದಾರೆ. ಈ ಕುರಿತು ಗಗನ ಶೆಟ್ಟಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.