ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹೋಳಿ: ಗುಂಪು ಘರ್ಷಣೆ

Lingaraj Badiger
Updated On : 19 Mar 2014, 12:27 pm

ಕುಂದಗೋಳ: ಹೋಳಿ ಹಬ್ಬದ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಘರ್ಷಣೆ ಸಂಭವಿಸಿದ ಪರಿಣಾಮ ಕೆಲಕಾಲ  ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಹೋಳಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿನ ಎಸ್ಟಿ ಕಾಲನಿ ಯುವಕರು ಬಣ್ಣದ ಸಂಭ್ರಮದಲ್ಲಿ ತೊಡಗಿರುವಾಗ ಅಲ್ಲಿಯೆ ಇದ್ದ ಇನ್ನೊಂದು ಗುಂಪಿನ ಯುವಕರಿಗೆ ಬಣ್ಣ ತಗುಲಿದೆ. ಪರಿಣಾಮ ಎರಡು ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದನ್ನು ನೋಡಿದ ಗ್ರಾಮಸ್ಥರು ತಕ್ಷಣ ಸಮಯ ಪ್ರಜ್ಞೆಯಿಂದ ಪರಿಸ್ಥಿತಿ ತಿಳಿಗೊಂಡಿತು. ಸೋಮವಾರ ರಾತ್ರಿ ಮತ್ತೆ ಒಂದು ಗುಂಪಿನ ಯುವಕರು ಇನ್ನೊಂದು ಗುಂಪಿನ ಯುವಕರ ಮನೆ ಹತ್ತಿರ ಹೋಗಿ ಅನುಚಿತವಾಗಿ ವರ್ತಿಸಿದ  ಪರಿಣಾಮ ಘರ್ಷಣೆ ಸಂಭವಿಸಿದೆ ಎಂದು ಗೊತ್ತಾಗಿದೆ. ಈ ಕುರಿತು ಪೊಲೀಸ್ ಠಾಣೆ ಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement