ಮತ ಹೆಚ್ಚಳಕ್ಕೆ ಪಾಲಿಕೆ ಟ್ರಿಕ್
ಹುಬ್ಬಳ್ಳಿ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕಾಗಿ ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ಸ್ವೀಫ್ ಯೋಜನೆಯಡಿ ಜಿಲ್ಲಾಡಳಿತ, ಜಿಲ್ಲಾ ಸ್ವೀಫ್ ಸಮಿತಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿವಿಧ ಚಟುವಟಿಕೆ ಹಮ್ಮಿಕೊಂಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ. 50ಕ್ಕಿಂತ ಕಡಿಮೆ ಮತದಾನ ಆದ ಪ್ರದೇಶಗಳನ್ನು ಗುರುತಿಸಿ, ಈ ಪ್ರದೇಶಗಳಲ್ಲಿ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿಗೆ ಮತದಾನಕ್ಕಾಗಿ ಸ್ವೀಫ್ ಯೋಜನೆಯಡಿ (ಖಣಡಡಿಜಟಛಡ್ಝ್ಛಿ ಗ್ಟಡಿಜ್ಠಡ ಊಜ್ಡ್ಛಛಡ್ಝ್ಟಿಟಿ ್ ಊಟಜ್ಛಡ್ಠ್ಟಿಟ ಕಿಛ್ಠಡ್ಝ್ಛ್ಝಿಠಛಡ್ಝ್ಟಿಟಿ) ಹಲವಾರು ಕಾರ್ಯಕ್ರಮಗಳು ಪ್ರಾರಂಭಗೊಂಡಿವೆ.
ಧಾರವಾಡ ವಿಧಾನಸಭೆ-71 ಮತಕ್ಷೇತ್ರದಲ್ಲಿ ನಗರ ವ್ಯಾಪ್ತಿಯ 10 ಮತಗಟ್ಟೆಗಳನ್ನು, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ-72 ಕ್ಷೇತ್ರ ವ್ಯಾಪ್ತಿಯ ಒಟ್ಟು 53 ಮತಗಟ್ಟೆಗಳನ್ನು, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ-73 ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 42 ಮತಗಟ್ಟೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭೆ-74 ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 45 ಮತಗಟ್ಟೆಗಳನ್ನ್ನು ಕಡಿಮೆ ಮತದಾನ ಪ್ರದೇಶಗಳನ್ನ್ನಾಗಿ ಗುರುತಿಸಲಾಗಿದೆ.
ಕಡಿಮೆ ಮತದಾನ ಪ್ರದೇಶಗಳಲ್ಲಿ ಸ್ವೀಪ್ ಯೋಜನೆಯಡಿ ಚುನಾವಣೆ ಆಯೋಗದ ನಿರ್ದೇಶನದಂತೆ ವಿಶೇಷ ಕಾರ್ಯಸೂಚ್ನಿ ತಯಾರಿಸಲಾಗಿದೆ. ಕಡಿಮೆ ಮತದಾನದ ಪ್ರದೇಶದಲ್ಲಿ ಕಡಿಮೆ ಮತದಾನ ಆದ ಕುರಿತು ಉದ್ದೇಶಗಳನ್ನ್ನು ಸಂಬಂಧಪಟ್ಟ ಭೂತ್ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮೀಕ್ಷಣ್ನೆ ಮಾಡಿ ಮಾಹಿತಿ ಪಡೆಯಲಾಗಿದೆ.
ವಿಶೇಷ ಕಾರ್ಯಸೂಚಿಯಂತೆ ಈ ಪ್ರದೇಶದ ವ್ಯಾಪ್ತಿಯ ನಗರ ಸ್ತ್ರೀಶಕ್ತಿ ಸಂಘದ ಸದಸ್ಯರು, ಯುವಕ-ಯುವತಿಯರು ಹಾಗೂ ಸರ್ಕಾರೇತರ ಸಂಘ, ಸಂಸ್ಥೆ ಮತ್ತು ಸರ್ಕಾರದ ಸ್ಥಳೀಯ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ವಿಶೇಷವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ಕುರಿತು ಮೆರವಣಿಗೆಯ ಮೂಲಕ, ವಿಶೇಷ ಘೋಷಣೆಗಳೊಂದಿಗೆ ಜನರ ಗಮನ ಸಳೆಯುವುದು, ಆಯಾ ಪ್ರದೇಶದ ಪ್ರಮುಖ ಸ್ಥ್ಥಳಗಳಲ್ಲಿ ಮತದಾನದ ಹಕ್ಕು, ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನದಲ್ಲಿ ಪಾಲ್ಗೊಳ್ಳುವಿಕೆ, ಬುದ್ಧಿವಂತ ಆಯ್ಕೆ ಮತದಾನದ ಕರ್ತವ್ಯ, ಮತದಾನ ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು, ಮುಕ್ತ ಮತದಾನ ಸ್ವಚ್ಛ ಪ್ರಜಾಪ್ರಭುತ್ವಕ್ಕೆ ವರದಾನ, ದೇಶದ ಭದ್ರ ಭವಿಷ್ಯ ರೂಪಿಸಲು ಮತಚಲಾಯಿಸುವುದು, ಏಪ್ರಿಲ್ 17ರಂದು ತಪ್ಪದೆ ಮತಗಟ್ಟೆಗೆ ಹೋಗಿ ಮತಚಲಾಯಿಸುವುದು, ಮತದಾರರು ಅಂದಿನ ದಿನ ತಮ್ಮ ಎಲ್ಲ ಕೆಲಸ ಬದಿಗಿಟ್ಟು ಮೊದಲು ಮತದಾನ ಮಾಡಲು ಗಮನ ಸೆಳೆಯಲಾಗುವುದು.
ಈ ಕಾರ್ಯಸೂಚಿಯಲ್ಲಿ ಕಡಿಮೆ ಮತದಾನ ಪ್ರದೇಶಗಳಲ್ಲಿ ಬೀದಿ ನಾಟಕ ಮೂಲಕ ಮತದಾನದ ಕುರಿತು ಜಾಗೃತಿ ಮಾಡಲಾಗುತ್ತದೆ. ಈ ಪ್ರದೇಶಗಳಲ್ಲಿ ಕಾಲ್ನ್ನಡಿಗೆ, ಮಕ್ಕಳಿಂದ ಸೈಕಲ್ ರ್ಯಾಲಿ, ಮನೆ ಮನೆಗೆ ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸುವ ಕುರಿತು ಕರಪತ್ರ ವಿತರಣೆ ಹಾಗೂ ಮತದಾನ ಸಮಯದಲ್ಲಿ ವಿದ್ಯುನ್ಮಾನ ಮತಯಂತ್ರ ಉಪಯೋಗಿಸುವ ಕುರಿತು ಮಾಹಿತ್ನಿ ನೀಡಲಾಗುತ್ತದೆ. ಪ್ರಮುಖ ಸ್ಥಳಗಳಲ್ಲಿ ವಿಡಿಯೋ ಪ್ರದರ್ಶನದ ಮೂಲಕ ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಗುವದು.
ಅವಳಿ ನಗರದ ಎಲ್ಲ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಮತದಾನದಲ್ಲಿ ಭಾಗವಹಿಸುವ ಕುರಿತು ಬ್ಯಾನರ್ ಹಾಗೂ ಹೋರ್ಡಿಂಗ್ ಮೂಲಕ ಗಮನ ಸೆಳೆಯಲಾಗುತ್ತದೆ. ವಿಶೇಷ ವಾರ್ತಾ ಮತ್ತು ಪ್ರಚಾರ ಇಲಾಖೆಯ ವಾಹನದೊಂದಿಗೆ ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸುವ ಕುರಿತು ಗಮನ ಸೆಳೆಯಲಾಗುವುದು. ಪ್ರಮುಖ ಪ್ರದೇಶಗಳಲ್ಲಿ ಮಾನವ ಸರಪಳಿ ನಿರ್ಮಾಣ, ಪ್ರಮುಖ ರಸ್ತೆಯಲ್ಲಿ ಮೇಣಬತ್ತಿ ದೀಪದೊಂದಿಗೆ ಜಾಗೃತಿ ಜಾಥಾ, ಅಟೋರಿಕ್ಷಾ ವಾಹನ ಮೂಲಕ ವಿಶೇಷ ಧ್ವನಿವರ್ಧಕ ಮೂಲಕ ಮತದಾರರನ್ನ್ನು ಜಾಗೃತಿಗೊಳಿಸಲಾಗುವುದು.
ಈ ದಿಸೆಯಲ್ಲಿ ಪಾಲಿಕೆಯು ಸ್ವೀಪ್ ಯೋಜನೆಯಡಿ ಈ ಎಲ್ಲ ಚಟುವಟಿಕೆ ಅಳವಡಿಸಿಕೊಂಡಿದ್ದು ಪ್ರತಿ ವಿಧಾನಸಭೆ ವ್ಯಾಪ್ತಿಯಲ್ಲಿ ನಿತ್ಯ ಕನಿಷ್ಠ 4ರಿಂದ 5 ಮತಗಟ್ಟೆಗಳಲ್ಲಿ ಪ್ರಚಾರ, ಜಾಗೃತಿ ಮಾಡಲಾಗುತ್ತದೆ.
ಪ್ರಸ್ತುತ ಲೋಕಸಭೆ ಚುನಾವಣೆಗಾಗಿ ಸ್ವೀಪ್ ಯೋಜನೆಯಲ್ಲಿ ಪ್ರಥಮ ಹಂತವಾಗಿ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಮತದಾನದ ಶಿಕ್ಷಣ ಮತ್ತು ಅರಿವು ಕಾರ್ಯಕ್ರಮದಲ್ಲಿ 'ಜನತಂತ್ರ'ದಡಿ ರೇಡಿಯೋ ಜಿಂಗಲ್ ಬುಧವಾರ ಉದ್ಘಾಟನೆಗೊಂಡಿತು. ಕೇಂದ್ರ ಚುನಾವಣಾ ಆಯೋಗದಿಂದ ಧಾರವಾಡ ಜಿಲ್ಲೆಗೆ ನಿಯೋಜಿಸಿದ ಚುನಾವಣಾ ವಿಕ್ಷಕರು (ಸ್ವೀಪ್ ವಿಭಾಗ) ಕೇಂದ್ರ ಸರ್ಕಾರದ ಅಧಿಕಾರಿ ಭುವೇಜಾ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಜನರಿಗೆ ಧಾರವಾಡ ಆಕಾಶವಾಣಿ ಕೇಂದ್ರ ಹಾಗೂ ವಿವಿಧ ಭಾರತಿ ಚಾನೆಲ್ಗಳಲ್ಲಿ ಪ್ರತಿ ದಿನ ಮಧ್ಯಾಹ್ನ್ನ 1 ಗಂಟೆಗೆ ಹಾಗೂ ಸಂಜೆ 8.40ಕ್ಕೆ ಚುನಾವಣೆಯಲ್ಲಿ ಮತದಾನದ ಮಹತ್ವ ಹಾಗೂ ಭಾಗವಹಿಸುವ ಕುರಿತು ಜನರಿಗೆ ಜಾಗೃತಿ ಮಾಡಲಾಗುತ್ತದೆ. ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣನವರ, ಧಾರವಾಡ ಆಕಾಶವಾಣಿ ಧಾರವಾಡ ಕೇಂದ್ರ ನಿರ್ದೇಶಕ ಬೆಳಕ್ಕಿ, ಪಾಲಿಕೆ ಅಧಿಕಾರಿಗಳು, ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳು ಹಾಗೂ ಧಾರವಾಡ ಆಕಾಶವಾಣಿ ಕೇಂದ್ರದ ಅಧಿಕಾರಿಗಳು ಭಾಗವಹಿಸಿದ್ದರು.