ಗರ್ಭಾಶಯದ ಕ್ಯಾನ್ಸರ್ ಪ್ರಮಾಣ ಹೆಚ್ಚಳ
ಧಾರವಾಡ: ಇತ್ತೀಚಿನ ದಿನಗಳಲ್ಲಿ ಗರ್ಭಾಶಯದ ಕ್ಯಾನ್ಸರ್ ಗಣನೀಯವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ ಎಂದು ಎಸ್‌ಡಿಎಂ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ರತ್ನಮಾಲಾ ದೇಸಾಯಿ ಹೇಳಿದರು.
ನಗರದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಹಾಗೂ ಲಯನ್ಸ್ ಕ್ಲಬ್ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಅಂಗವಾಗಿ ಗರ್ಭಾಶಯದ ಜಾಗೃತಿ ಹಾಗೂ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮೇರೆಗೆ 21 ವರ್ಷದಿಂದ ಮೇಲ್ಪಟ್ಟ ಮಹಿಳೆಯರು ಕನಿಷ್ಠ ಮೂರು ವರ್ಷಕ್ಕೊಮ್ಮೆಯಾದರೂ ಗರ್ಭಾಶಯ ಕ್ಯಾನ್ಸರ್ ತಪಾಸಣೆ ಮಾಡಿಕೊಳ್ಳಬೇಕು. ಇದರಿಂದ ಮುಂಬರುವ ರೋಗ ತಡೆಗಟ್ಟಲು ಸಹಾಯವಾಗುತ್ತದೆ ಎಂದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಸವಿತಾ ಕುಸುಗಲ್ ಮಾತನಾಡಿದರು. ಡಾ. ಪ್ರೇಮಾ ಹಳ್ಳಿಕೇರಿ, ಡಾ. ತಾವರಗೇರಿ, ಡಾ, ಲಕ್ಷ್ಮೀ ಎಲಿವಾಳ, ಡಾ. ವಿನಯಾ ಕುಲಕರ್ಣಿ ಹಾಜರಿದ್ದರು. ವ್ಯವಸ್ಥಾಪಕಿ ಸುಜಾತಾ ಅನಿಶೆಟ್ಟರ ಸ್ವಾಗತಿಸಿದರು.