ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಮೆಗಾ ಉದ್ಯೋಗ ಮೇಳ

Mainashree
Updated On : 29 Mar 2014, 9:58 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 28್ಙ
ನಗರದ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಮಾ. 29ರಂದು 'ಮೆಗಾ ಉದ್ಯೋಗ ಮೇಳ' ಆಯೋಜಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಏರ್ಪಡಿಸಿರುವ ಈ ಉದ್ಯೋಗಮೇಳದಲ್ಲಿ 30ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಳ್ಳುತ್ತಿವೆ ಎಂದು ಆಕ್ಸ್‌ಫರ್ಡ್ ಕಾಲೇಜಿನ ಚೇರ್‌ಮನ್ ವಸಂತ ಹೊರಟ್ಟಿ ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಅಂದು ಬೆಳಗ್ಗೆ 9.30 ರಿಂದ ರಾತ್ರಿ 8.30ರ ವರೆಗೆ ನಡೆಯಲಿರುವ ಉದ್ಯೋಗಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಸೇರಿದಂತೆ ಹೊರರಾಜ್ಯಗಳ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ 1,262 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಸುಮಾರು 4 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಈ 30 ಕಂಪನಿಗಳಲ್ಲಿ ನಾಲ್ಕು ಬಿಪಿಓ ಕಂಪನಿಗಳಿದ್ದು, ಇನ್ನುಳಿದವು ಬ್ಯಾಂಕ್ ಹಾಗೂ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿವೆ. ಉದ್ಯೋಗಮೇಳದ ಬಗ್ಗೆ ಆನ್‌ಲೈನ್ ಮೂಲಕ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಎಂಜಿನಿಯರಿಂಗ್, ಕಾಮರ್ಸ್ ಸೇರಿದಂತೆ ವಿವಿಧ ಪದವಿಗಳ ಜೊತೆಗೆ ಪಿಯುಸಿ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು ಎಂದು ಹೇಳಿದರು.
ಒಟ್ಟು 2,030 ಉದ್ಯೋಗಗಳಿಗಾಗಿ ಸಂದರ್ಶನ ನಡೆಯಲಿದೆ. ಒಬ್ಬ ವಿದ್ಯಾರ್ಥಿ ಸಂದರ್ಶನಕ್ಕಾಗಿ ಮೂರು ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೋಂದಣಿ ಶುಲ್ಕ ರು. 100 ನಿಗದಿಪಡಿಸಲಾಗಿದೆ. ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅಂದು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ರಾಜಕಾರಣಿಗಳು ಪಾಲ್ಗೊಳ್ಳುತ್ತಿಲ್ಲ.
ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಉದ್ಯೋಗಮೇಳ ಹಾಗೂ ಮಧ್ಯಾಹ್ನದ ಊಟಕ್ಕಾಗಿ ಚುನಾವಣಾಧಿಕಾರಿಗಳಿಂದ ಅನುಮತಿಯನ್ನೂ ಪಡೆಯಲಾಗಿದೆ ಎಂದು ಹೊರಟ್ಟಿ ತಿಳಿಸಿದರು.
ಎಚ್‌ಆರ್ ಪ್ಲ್ಯಾನ್ ಮ್ಯಾನ್, ಆಕ್ಷಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದುಜಾ ಗ್ಲೋಬಲ್ ಸೊಲ್ಯುಷನ್, ಆದಿತ್ಯ ಬಿರ್ಲಾ ಮಿನ್ಯಾಕ್ಸ್, ಏಜಿಸ್, ಐಸಿಐಸಿಐ ಬ್ಯಾಂಕ್ ಮತ್ತಿತರ ಕಂಪನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸುತ್ತಿವೆ. ಉದ್ಯೋಗಮೇಳ ನಡೆಯಲಿರುವ ಮಾ. 29ರ ಬೆಳಗ್ಗೆ 7 ಗಂಟೆಯಿಂದ 11ರವರೆಗೂ ಸ್ಥಳದಲ್ಲಿಯೇ ಹೆಸರು ನೋಂದಣಿ ಮಾಡಿಕೊಳ್ಳುವ ಅವಕಾಶವೂ ಇದೆ. ಉದ್ಯೋಗಮೇಳದಲ್ಲಿ ಪಾಲ್ಗೊಳ್ಳಬಯಸುವವರು ಮೊಸಂ 9845115557 ಅಥವಾ ದೂಸಂ 0836 2280741/45 ಅಥವಾ ಢಿಢಿಢಿ.ಢಛಡಛಟಿಝ್ಟ್ಠಿಛಡಿಡ್ಝಿ.್ಛ್ಟಟ ವೆಬ್‌ಸೈಟ್ ಸಂಪರ್ಕಿಸಲು ಕೋರಿದರು.
ಕಾಲೇಡಿನ ಪದವಿ ವಿಭಾಗದ ಪ್ರಾಚಾರ್ಯ ಜೀತೇಂದ್ರ ಶೀಗೀಹಳ್ಳಿ, ಡಾ. ಉತ್ತಮ ಕೆನಂಗೆ, ಸುಮಿತ ಬೆಕಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement