ಕಲಘಟಗಿ: ವಿನಯ ಕುಲಕರ್ಣಿ ಪ್ರಚಾರ
ಕಲಘಟಗಿ: ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಶುಕ್ರವಾರ ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ತಾಲೂಕ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ಪಾಟಿಲ, ಜಿಲ್ಲಾಧ್ಯಕ್ಷ ಎಚ್.ವಿ.ಮಾಡಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಆರ್.ಪಾಟಿಲ, ಉಪಾಧ್ಯಕ್ಷ ಎಸ್.ಎಂ.ಚಿಕ್ಕಣ್ಣವರ, ಮಾಜಿ ಎಪಿಎಂಸಿ ಅಧ್ಯಕ್ಷ ಎಸ್.ಎನ್.ಬೆಳ್ಳಿವಾಲೆ, ಕಿರಣ ಪಾಟೀಲ, ಪ್ರಭು ರಾಮನಾಳ, ಚನ್ನಯ್ಯ ಹಿರೇಮಠ, ಮಂಜುನಾಥ ಧಾರವಾಡ, ಸಂಗನಗೌಡ ಪಾಟಿಲ, ಯಲ್ಲಪ್ಪ ರಾಮನಾಳ, ಎನ್.ಬಿ.ಕುರಿ, ಎಸ್.ಎಸ್.ನೂಲ್ವಿ ಇದ್ದರು.