ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮೊಬೈಲ್ ಟವರ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 29 Mar 2014, 9:58 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 28
ಇಂದ್ರಪ್ರಸ್ಥನಗರದಲ್ಲಿ ಅಳವಡಿಸಲಾಗಿರುವ ಮೊಬೈಲ್ ಟವರ್‌ನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿ ಆ ಭಾಗದ ನೂರಾರು ಜನರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಂದ್ರಪ್ರಸ್ಥನಗರದ ಜನವಸತಿ ಪ್ರದೇಶದಲ್ಲಿ ಶಿವಪ್ಪ ರಾಮಣ್ಣ ಗಾರವಾಡ ಎಂಬುವರ ಮೊಬೈಲ್ ಟಾವರ್ ಅಳವಡಿಸಿದ್ದರಿಂದ ಈ ಭಾಗದಲ್ಲಿ ವಾಸವಾಗಿರುವ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮೊಬೈಲ್ ಟವರ್ ಅಳವಡಿಕೆಗೆ ಸ್ಥಳೀಯರು ಸಾಕಷ್ಟು ವಿರೋಧಿಸಿದ್ದರೂ ಅದಕ್ಕೆ ಯಾವುದೇ ರೀತಿಯಿಂದ ಸ್ಪಂದಿಸದ ಗಾರವಾಡ, ವಾರ್ಡ್‌ನಂ 40ರಲ್ಲಿರುವ ಅಂಗನವಾಡಿ ಶಾಲೆ ಹಾಗೂ ಕಾಲೇಜ್ ಪಕ್ಕದಲ್ಲಿ ಟವರ್ ಅಳವಡಿಸಿದ್ದಾರೆ ಎಂದು ದೂರಿದರು. ಈ ಭಾಗದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮೊಬೈಲ್ ಟವರ್‌ನ್ನು ಪಾಲಿಕೆ ಆಯುಕ್ತರು ತಕ್ಷಣ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮನವಿಯನ್ನು ಅರ್ಪಿಸಲಾಯಿತು.
ಎಸ್.ವಿ. ರಾಜೂರ, ಎಸ್.ಎಸ್. ಪೂಜಾರ, ಚನ್ನಬಸಯ್ಯ ಹಿರೇಮಠ, ಎಸ್.ಬಿ. ಕಬ್ಬೂರ, ಐ.ಎಸ್. ಹೆಬ್ಬಳ್ಳಿ, ನಂದಾ ಸೋನೇನ, ರೂಪಾ ಬದ್ದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement