ಧಾರವಾಡ: ಕೆವಿಜಿ ಬ್ಯಾಂಕ್, ಎಲ್‌ಐಸಿ ಒಪ್ಪಂದ
ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಎಲ್‌ಐಸಿ ಮೂಲಕ ಜೀವ ವಿಮಾ ಯೋಜನೆಗಳ ಮಾರಾಟಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕೆವಿಜಿ ಬ್ಯಾಂಕಿನ ಅಧ್ಯಕ್ಷ ಅಶೋಕ ರೆಡ್ಡಿ ಮತ್ತು ಎಲ್‌ಐಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಂ. ಜಗನ್ನಾಥ ಒಡಂಬಡಿಕೆಗೆ ಸಹಿ ಮಾಡಿದರು. ಬ್ಯಾಂಕಿನ ಎಲ್ಲ 546 ಶಾಖೆಗಳಲ್ಲಿ ಎಲ್.ಐ.ಸಿ ಎಲ್ಲ ಯೋಜನೆಗಳು ಮಾರಾಟಕ್ಕೆ ಲಭ್ಯ. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ರೆಡ್ಡಿ, ದೈನಂದಿನ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಬರುವ ಜನರು ಅಲ್ಲಿಯೇ ಜೀವ ವಿಮಾ ಪಾಲಿಸಿಯನ್ನು ಕೊಳ್ಳಬಹುದಾಗಿದೆ. ಇದರಿಂದ ವಿಶೇಷವಾಗಿ ಗ್ರಾಮೀಣ ಜನರು ಒಂದಿಲ್ಲೊಂದು ರೀತಿಯಲ್ಲಿ ಜೀವ ವಿಮಾ ವ್ಯಾಪ್ತಿಗೆ ಒಳಪಟ್ಟು ಹೆಚ್ಚಿನ ಸಾಮಾಜಿಕ ಭದ್ರತೆಗೊಳಪಡುವರು. ಇದು ಬ್ಯಾಂಕ್ ಇತಿಹಾಸದಲ್ಲಿಯೇ ಮೈಲಿಗಲ್ಲು ಎಂದರು. ಎಲ್.ಐ.ಸಿ ಕಾರ್ಯ ನಿರ್ವಾಹಕ ನಿರ್ದೇಶಕ ಟಿ.ಸಿ. ಸುಶೀಲ ಕುಮಾರ, ರಾಷ್ಟ್ರದಲ್ಲಿ ಜೀವ ವಿಮಾ ವ್ಯವಹಾರಕ್ಕೆ ವಿಫುಲ ಅವಕಾಶವಿದ್ದು ಎಲ್.ಐ.ಸಿ ಇದನ್ನು ವ್ಯವಹಾರಕ್ಕಿಂತ ಹೆಚ್ಚಾಗಿ ಸಾಮಾಜಿಕ ಭದ್ರತೆ ಒದಗಿಸುವ ಒಂದು ವಿಶಿಷ್ಟ ಕಾರ್ಯಕ್ರಮ ಎಂದು ಭಾವಿಸಿದೆ ಎಂದರು. ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಂ. ಜಗನ್ನಾಥ ಮಾತನಾಡಿದರು. ಎಲ್.ಐ.ಸಿ ಪ್ರಾದೇಶಿಕ ವ್ಯವಸ್ಥಾಪಕ ಕೆ.ಕೆ. ದಾಸ್, ಜೆ. ಜಗದೀಶ, ಗಣಪತಿ ಭಟ್, ಎಂ.ಎಂ. ಇನಾಂದಾರ, ಸೂರ್ಯಕಾಂತ ಗಂಗಾ, ಉಲ್ಲಾಸ ಗುನಗಾ, ರಮೇಶ ತುಂಗಾ ಇದ್ದರು.