ಬಸವಣ್ಣ ಸರ್ವ ಸಮಾಜದ ದಾರ್ಶನಿಕ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 2
ವಿಶ್ವಗುರು ಎಂದು ಕರೆಯಿಸಿಕೊಂಡಿರುವ ಬಸವಣ್ಣ ಕೇವಲ ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಾಗಿಲ್ಲ. ಅವರು ನೀಡಿರುವ ಮೌಲ್ಯಗಳು, ವಚನಗಳು ಅವರನ್ನ್ನು ಸರ್ವ ಸಮುದಾಯದ ದಾರ್ಶನಿಕರೆಂದು ಸಾರುತ್ತವೆ ಎಂದು ಬೀದರದ ಬೆಲ್ದಾಳ ಸಿದ್ದರಾಮ ಶರಣರು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾ ಭವನದಲ್ಲಿ ಬಸವೇಶ್ವರ ಪೀಠವು ಆಯೋಜಿಸಿದ್ದ ಬಸವ ಜಯಂತೋತ್ಸವದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರ ಇಂದು ಬಸವ ಜಯಂತ್ನಿ ಆಚರಿಸುತ್ತಿದೆ. ಆದರೆ ಇಂತಹ ಆಚರಣೆಗೆ ನಿಜವಾದ ಅರ್ಥ ಬರಬೇಕಾದರೆ ನಾವುಗಳು ಬಸವಣ್ಣನವರು ಹಾಕಿ ಕೊಟ್ಟ ಮೌಲ್ಯಾದರ್ಶಗಳನ್ನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಜಾತಿಗೊಂದು ಮಠ, ಪೀಠಗಳನ್ನ್ನು ಹುಟ್ಟುಹಾಕಿ ನಿಜವಾದ ಬಸವ ತತ್ವಕ್ಕೆ ತಿಲಾಂಜಲಿ ನೀಡುವ ಕಾರ್ಯವನ್ನು ಕೆಲವರು ವ್ಯವಸ್ಥಿತವಾಗಿ ಮಾಡುತ್ತಿದ್ದು, ಇದು ಬಸವ ತತ್ವಕ್ಕೆ ವಿರುದ್ಧ ಮತ್ತು ಆಘಾತಕಾರಿ ಸಾಮಾಜಿಕ ಬೆಳವಣಿಗೆಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ, ಶೂನ್ಯ ಸಂಪಾದನೆ ಅತ್ಯಂತ ಮಹತ್ವ ಕೃತಿಯಾಗಿದೆ. ಕರ್ನಾಟಕ ಸರ್ಕಾರವು ವಿಶ್ವವಿದ್ಯಾಲಯ ಸಲ್ಲಿಸಿದ್ದ ಬಸವ ಪೀಠದ 2.90ಕೋಟಿಗಳ ಪ್ರಸ್ತಾವನೆಗೆ ವಿಶ್ವವಿದ್ಯಾಲಯಕ್ಕೆ ಈಗಾಗಲೆ ಒಂದು ಕೋಟ್ನಿ ಬಿಡುಗಡೆ ಮಾಡಿದ್ದು ಉಳಿದ ಹಣವು ಶೀಘ್ರದಲ್ಲಿಯೆ ಬಿಡುಗಡೆಯಾಗಿಲಿದೆ ಎಂದು ಹೇಳಿದರು.
ವೇಮನ ಪೀಠ, ಅಂಬೇಡ್ಕರ್, ಕನಕ ಪೀಠಗಳಿಗೂ ಅನುದಾನ ಲಭಿಸಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯ ಚಟುವಟಿಕೆಯನ್ನು ಆಯೋಜಿಸಲಾಗುವದು. ಶರಣರ ಆಶಯದಂತೆ ಅಗತ್ಯವಿರುವ ಬಸವಾದಿ ಶರಣರ ವಚನ ಸಂಪುಟ, ಜೀವನ ಚರಿತ್ರೆಗಳನ್ನು ವಿಶ್ವವಿದ್ಯಾಲಯದಿಂದಲೆ ಮರುಮುದ್ರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಸವಕಲ್ಯಾಣದ ಸಾಧಕ ಶ್ರೀ ಗಂಗಾಧರ ದೇವರು, ಸಿದ್ದರಾಮ ಶರಣರು, ಮಾತೋಶ್ರೀ ಗಾಯತ್ರಿ ತಾಯಿ, ಸರಸ್ವತಿ ತಾಯಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಬ್ಬೂರು ಗ್ರಾಮದ ಹಿರಿಯರಾದ ಲಕ್ಷ್ಮಣ ತೇರದಾಳಿ, ಸತೀಶ ತೇರದಾಳಿ ಹಾಗೂ ಕವಿವಿ ಯ ಕಲಾ ನಿಖಾಯದ ಡೀನ್ ಡಾ. ಗಾಯಕವಾಡ, ಅಭಿವೃದ್ಧಿ ಅಧಿಕಾರಿ ಡಾ.ಎಸ್.ಟಿ.ಬಾಗಲಕೋಟಿ, ಡಾ.ಖಾಜಿ, ಡಾ.ಕಾಡದೇವರಮಠ, ಡಾ.ಎಸ್.ಎಲ್.ಸಣ್ಣೆಲ್ಲಪ್ಪನವರ, ಶಿವಾನಂದ ಎಲ್ ಬೀಳಗಿ, ಡಾ.ಮುಗದೂರ ಮುಂತಾದವರು ಇದ್ದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ. ಚಂದ್ರಮಾ ಕಣಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರಾದ ಡಾ.ಜೆ.ಎಂ. ನಾಗಯ್ಯ ಪರಿಚಯಿಸಿದರು. ನಿಟ್ಟೂರ ಶಿವಸೋಮಣ್ಣ ನಿರೂಪಿಸಿ, ಡಾ.ಪಂಡಿತ ರಾಠೋಡ ವಂದಿಸಿದರು.