ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಶಿಸುತ್ತಿದೆ ಹಳ್ಳಿ ಗಂಡೆದೆ ಕುಸ್ತಿಯಾಟ

Rashmi Kasaragodu
Updated On : 4 May 2014, 12:46 pm

ಧಾರವಾಡ: ತಾಲೂಕಿನ ಲೋಕುರ ಗ್ರಾಮದಲ್ಲಿ ರೇವಣಸಿದ್ಧೇಶ್ವರ ಮತ್ತು ಶರಣ ಬಸವೇಶ್ವರ ಜಾತ್ರೆಯ ಅಂಗವಾಗಿ ಜಂಗಿ ನಿಕಾಲಿ ಬಯಲು ಕುಸ್ತಿ ನಡೆಯಿತು.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ವಿನಯ ಕುಲಕರ್ಣಿ, ಗ್ರಾಮೀಣ ಭಾಗದ ಗಂಡೆದೆಯ ಆಟವಾದ ಕುಸ್ತಿ ಇಂದು, ನಶಿಸಿ ಹೋಗುವ ಹಂತಕ್ಕೆ ಬಂದು ನಿಂತಿದೆ. ಪ್ರತಿ ಗ್ರಾಮದಲ್ಲಿ ಹತ್ತಾರು ಜನಕ್ಕೊಂದು ಕಾಣ ಸಿಗುತ್ತಿದ್ದ ಗರಡಿ ಮನೆಗಳು ಇಂದು ಮಾಯವಾಗಿವೆ. ಕುಸ್ತಿ ಗ್ರಾಮೀಣರ ಪ್ರೀತಿಯ ಆಟವಾಗಿದ್ದು, ಗ್ರಾಮೀಣರು ತಮ್ಮ ಮಕ್ಕಳನ್ನು ಈ ಆಟಕ್ಕೆ ಪ್ರೇರೇಪಿಸಿ ಮಕ್ಕಳ ಆರೋಗ್ಯದೊಂದಿಗೆ, ಕುಸ್ತಿ ಆಟ ಉಳಿಸಬೇಕೆಂದರು.
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ, ಧಾರವಾಡ ಎಪಿಎಂಸಿ ಅಧ್ಯಕ್ಷ ವಿಜಯ ಕುರಕುರಿ, ಮಾಜಿ ಪೈಲವಾನ, ಹಿಂದ ಕೇಸರಿ ಮುದಕಪ್ಪ ದೊಡವಾಡ, ಕಾಂಗ್ರೆಸ್ ಮುಖಂಡ ಕಿರಣ ಬೀರಗೌಡರ, ವಿನಾಯಕ ಕಟಗಿ, ಮಂಜುನಾಥ ಭೋವಿ, ರಾಯಪ್ಪ ಬಾಗಲಕೋಟಿ, ರಮಜಾನ್ ನದಾಫ್, ನಾಗಪ್ಪ ಚಿಕಣಿ, ಗಂಗಪ್ಪ ಬಾಗಲಕೋಟಿ, ಶಾಂತಪ್ಪ ಬಿಲ್ಲನವರ, ಈರಪ್ಪ ಕೋನಪ್ಪನವರ, ಮಹಾವೀರ ನರಸಿಂಗನವರ, ಬಾಳಪ್ಪ ಕಿಂದರಿ, ಮೌನೇಶ ಪೂಜಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement