ಮಾಸ್ ಬ್ಯುಸಿನೆಸ್ ಸೊಲ್ಯೂಶನ್ಸ್ಗೆ ಸಮಗ್ರ ವೀರಾಗ್ರಣಿ
ಹುಬ್ಬಳ್ಳಿ: ನಗರದ ಬಿವಿಬಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಜ್ ಆ್ಯಂಡ್ ರಿಸರ್ಚ್ ಸಂಸ್ಥೆ ವತಿಯಿಂದ ಇತ್ತೀಚಿಗೆ ಕಾರ್ಪೋರೇಟ್ ಸಂಸ್ಥಗಳಿಗೆ ಮ್ಯಾನೇಜ್ಮೆಂಟ್ ಫೆಸ್ಟ್ನ್ನು ಹಮ್ಮಿಕೊಳ್ಳಲಾಗಿತ್ತು. ಫೆಸ್ಟ್ನಲ್ಲಿ ಉತ್ತರ ಕರ್ನಾಟಕದ ಪ್ರತಿಷ್ಠಿತ 14 ಕಂಪನಿಗಳ 90 ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಪೈಕಿ ರಸಪ್ರಶ್ನೆ, ಸಾರಥಿ (ಅತ್ಯುತ್ತಮ ವ್ಯವಸ್ಥಾಪಕ), ಪರಿವರ್ತನ (ಸಾಮಾಜಿಕ ಅರಿವು), ಚಕ್ರವ್ಯೂಹ (ನಿರ್ವಹಣೆ ಆಟಗಳು), ನೃತ್ಯ (ಸಾಂಸ್ಕೃತಿಕ) ಹಾಗೂ ಕ್ರಿಕ್-ಓ-ಮಾನಿಯಾ (ಕ್ರಿಕೆಟ್) ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ನೈಪುಣ್ಯತೆ ತೋರಿಸಲು ಈ ಫೆಸ್ಟ್ ಅತ್ಯುತ್ತಮ ವೇದಿಕೆಯಾಗಿ ಪರಿಣಮಿಸಿತು. ಸ್ಪರ್ಧೆಯಲ್ಲಿ 4 ಮಾಸ್ ಬ್ಯುಸಿನೆಸ್ ಸೆಲ್ಯೂಶನ್ಸ್ ಕಂಪನಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.