ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮೈದಾನದ ಆಟಗಳು ಮನೋವಿಕಾಸಕ್ಕೆ ಪೂರಕ

Rashmi Kasaragodu
Updated On : 4 May 2014, 12:45 pm

ಧಾರವಾಡ: ಫೆಸ್ಬುಕ್, ವಿಡಿಯೋಗೇವ್ ನಂತಹ ತಲೆಕೆಳಗೆ ಹಾಕಿ ಆಡುವ ಆಟಗಳಿಂದ ದೈಹಿಕ ನ್ಯೂನ್ಯತೆ ಮಾನಸಿಕ ಖಿನ್ನತೆ ಆವರಿಸಿಕೊಳ್ಳುತ್ತದೆ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಉಪ ನಿರ್ದೇಶಕ ಬಸವಪ್ರಭು ಹೇಳಿದರು. ಜೆಎಸ್ಎಸ್ ಮಂಜುನಾಥೇಶ್ವರ ಐ.ಟಿ.ಐ ಸಂಘಟಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮೈದಾನಗಳಲ್ಲಿ ಆಡುವ ಆಟಗಳಿಂದ ದೈಹಿಕ ಪರಿಶ್ರಮ, ಮಾನಸಿಕ ನೆಮ್ಮದಿ ಹಾಗೂ ಹೊಸ ಗೆಳೆತನಕ್ಕೆ ದಾರಿಯಾಗುತ್ತದೆ ಎಂದರು. ಉಪನಿರ್ದೇಶಕ ದ್ಯಾವನಗೌಡರ, ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಮಾತನಾಡಿದರು. ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಜಿನೇಂದ್ರ ಕುಂದಗೋಳ ನಿರೂಪಿಸಿದರು. ಮಹೇಶ ಬಡಿಗೇರ ವಂದಿಸಿದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ಸಾಯಿ ಐ.ಟಿ.ಐ. ಪ್ರಥಮ ಸ್ಥಾನ, ಜೆಎಸ್ಸೆಸ್ ದ್ವಿತೀಯ ಸ್ಥಾನ ಹಾಗೂ ಸನ್ಮಿತ ಐ.ಟಿ.ಐ ತೃತೀಯ ಸ್ಥಾನಗಳನ್ನು ಪಡೆದುಕೊಂಡವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement