ಶಿಕ್ಷಣ ಸಂಸ್ಥೆ ಸಂಸ್ಕಾರಯುತ ಶಿಕ್ಷಣ ನೀಡಲಿ: ಪಾಟೀಲ
ಧಾರವಾಡ: ಉತ್ತಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ, ಸಂಸ್ಕಾರಯುತ ಹಾಗೂ ತಾತ್ವಿಕ ನೆಲೆಗಟ್ಟಿನ ಶಿಕ್ಷಣ ಅವಶ್ಯವಾಗಿದ್ದು, ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಹ್ಯಾಪಿಲಿ ಲಿವಿಂಗ್ ಫೌಂಡೇಶನ್ನ ಮುಖ್ಯಸ್ಥ ಎ.ಪಿ. ಪಾಟೀಲ ಗುರೂಜಿ ಹೇಳಿದರು. ತಾಲೂಕಿನ ಸಿಂಗನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನವಾಗಿ ಆರಂಭಗೊಂಡ ಧಾರವಾಡ ಅಂತಾರಾಷ್ಟ್ರೀಯ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿಶ್ರಾಂತ ಕುಲಪತಿ ಡಾ.ಎಂ.ಐ.ಸವದತ್ತಿ, ಕನಾಟಕ ವಿವಿ ಕುಲಪತಿ ಡಾ.ಎಚ್.ಬಿ.ವಾಲಿಕಾರ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಜಿ.ವಿ. ಕೊಂಗವಾಡ ಅಧ್ಯಕ್ಷತೆವಹಿಸಿದ್ದರು. ನಿವೃತ್ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೆ. ಹಿರೇಗೌಡರ, ಡಿ.ಬಿ. ಸಕ್ರಿ ಹಾಗೂ ಶಿವಾನಂದ ಬೀಳಗಿ, ಆನಂದ ಮಗದುಮ್, ವೆಂಕಟೇಶ ಮಾಚಕನೂರ, ಸಿ.ಬಿ. ಯಲಿಗಾರ, ಶಿವಾನಂದ ಶೆಟ್ಟೆಣ್ಣವರ ಇದ್ದರು. ಅಭಿಷೇಕ ನಿರೂಪಿಸಿದರು.