ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಲ್ಲ ಕ್ಷೇತ್ರಗಳಲ್ಲಿ ರೋಬೋಟ್ ಉಪಯೋಗ: ಮೋಹನಕುಮಾರ

Mainashree
Updated On : 9 May 2014, 10:29 am

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 8
ಪ್ರಸ್ತುತ ಕೃಷಿ, ವೈದ್ಯಕೀಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ರೋಬೋಟ್‌ಗಳ ಉಪಯೋಗ ಸಾಕಷ್ಟಿದೆ ಎಂದು ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯ ಡಾ. ಮೋಹನಕುಮಾರ ಹೇಳಿದರು.
ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ರಾಜ್ಯ ವಿಜ್ಞಾನ ಪರಿಷತ್ ಜಂಟಿಯಾಗಿ ಬುಧವಾರ ಹಮ್ಮಿಕೊಂಡಿದ್ದ ಮೂರು ದಿನಗಳ ವೈಜ್ಞಾನಿಕ ಕಥಾ ಲೇಖನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ಕಾಲ್ಪನಿಕ ಕಥೆಗಳನ್ನು ಬರೆಯುವ ಹವ್ಯಾಸ ಬಹಳ ಹಳೆಯದು ಎಂದರು. ಇಂತಹ ಕಥೆಗಳನ್ನು ಹಲವಾರು ಲೇಖಕರು ಬರೆದಿದ್ದಾರೆ. ಅವುಗಳ ಆಧಾರದ ಮೇಲೆ ಸಾಕಷ್ಟು ಚಲನ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ, ಇತ್ತೀಚೆಗೆ ರೋಬೋಟ್‌ಗಳ ಬಳಕೆಯಾಗುತ್ತಿದ್ದು, ಅಮೇರಿಕದಲ್ಲಂತೂ ರೋಬೋಟ್‌ನಿಂದ ಯುದ್ದಗಳನ್ನು ಮಾಡಲು ಯೋಚಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಟಿ. ಪೋತೆ, ವಿಜ್ಞಾನದ ವಿದ್ಯಾರ್ಥಿಗಳು ಯಾವುದಕ್ಕೆ ವಿಜ್ಞಾನ ಬಳಸಲಾಗುತ್ತದೆ ಎನ್ನುವುದರ ಕುರಿತು ಮಾಹಿತಿ ಹೊಂದಿರಬೇಕು ಎಂದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಯು.ಎಸ್. ರಾಯಕರ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಎಸ್.ವಿ. ಸಂಕನೂರ, ಪ್ರೊ. ರಾಜಶೇಖರ ಭೂಸನೂರಮಠ, ಹ.ಶಿ. ಭೈರನಟ್ಟಿ, ಡಾ.ಎಂ.ಎಚ್. ಶ್ರೀನರಹರಿ, ಸಾಹಿತಿ ಡಾ. ವಿಜಯಕುಮಾರ ಗಿಡ್ನವರ, ಲಿಂಗರಾಜ ರಾಮಾಪೂರ, ಸಿ.ಎಫ್. ಚಂಡೂರ, ವಿಶಾಲಾಕ್ಷಿ ಎಸ್.ಜೆ.  ಸಂಜೀವಕುಮಾರ ಭೂಶೆಟ್ಟಿ ಇದ್ದರು. ಎಸ್.ಕೆ. ರಂಜಣಗಿ, ಆರ್.ಪಿ.ಗಾಳಿ, ಎಸ್.ಎಫ್. ಆಡಿನ, ಎಂ.ಸಿ. ಕಂದಗಲ್ಲ, ಅಡಿವೆಪ್ಪ ಅಂತಣ್ಣವರ, ಅಭಿಷೇಕ ಸಿ. ಶಶಿಧರ ಬಿ., ಪ್ರಮೋದ ಆರ್., ಎಂ.ಕೆ. ಹೋರಕೇರಿ, ಲಕ್ಷ್ಮಣ. ಕೆ.ಎನ್., ಶ್ಯಾಮ ತೇಲಗಾರ, ಕು.ಬಿ.ಎಸ್. ಗಾಂವಕರ ಎಂ.ಸಿ. ಶಂಕರೇಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement