ಹುಬ್ಬಳ್ಳಿಯಲ್ಲಿ ವೈದ್ಯರ 32ನೇ ಸಮ್ಮೇಳನ
ಹುಬ್ಬಳ್ಳಿ: ಭಾರತೀಯ ತಜ್ಞ ವೈದ್ಯರ 32ನೇ ಸಮ್ಮೇಳನ ಹುಬ್ಬಳ್ಳಿಯ ಕಿಮ್ಸ್ ಸಭಾಭವನದಲ್ಲಿ ಮೇ 16, 17 ಹಾಗೂ 18ರಂದು ನಡೆಯಲಿದೆ. 12 ವರ್ಷಗಳ ಬಳಿಕ ಹುಬ್ಬಳ್ಳಿಗೆ ಈ ಸಮ್ಮೇಳನ ಆಯೋಜಿಸುವ ಅವಕಾಶ ಸಿಕ್ಕಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ಡಾ. ಜಿ.ಬಿ. ಸತ್ತೂರ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 16ರಂದು ಸಂಜೆ 6 ಗಂಟೆಗೆ ಕರ್ನಾಟ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಚ್.ಬಿ. ವಾಲೀಕಾರ ಸಮ್ಮೇಳನ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಡಾ. ಸಂಜೀವಕುಮಾರ ಹಾಗೂ ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಆಗಮಿಸುವರು. ಒಟ್ಟು 48 ಉಪನ್ಯಾಸ ಆಯೋಜಿಸಲಾಗಿದೆ. ಪ್ರಮುಖವಾಗಿ ಹೃದ್ರೋಗ, ಜಠರ, ಕರುಳು ಹಾಗೂ ಕೃತಕ ಉಸಿರಾಟ ಯಂತ್ರದ ಕುರಿತಾಗಿ ನೇರ ಪ್ರಸಾರ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.