ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕವಿವಿ ಅವ್ಯವಹಾರ: ಉನ್ನತತನಿಖೆಗೆ ಎಬಿವಿಪಿ ಒತ್ತಾಯ

Lingaraj Badiger
Updated On : 20 May 2014, 12:40 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 19
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅವ್ಯವಹಾರದ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅಮಾನತುಗೊಳಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ರಾಜ್ಯ ಕಾರ್ಯದರ್ಶಿ ಟಿ.ಎಸ್. ಸುನೀಲ ಪ್ರಸಾದ, ಕವಿವಿ ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿಗಳ ಆತಿಥ್ಯಕ್ಕೆ ಸಂಬಂಧಿಸಿದಂತೆ ನಡೆದಿರುವ ಅವ್ಯವಹಾರಗಳಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೇ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ವಿವಿ ಆಡಳಿತ, ಕುಲಪತಿಗಳು ಹಾಗೂ ಕುಲಸಚಿವರ ಕ್ರಮ ಖಂಡನೀಯ ಎಂದರು.
ಕವಿವಿ ಯೋಜನಾ ಮತ್ತು ಅಭಿವೃದ್ಧಿ ಅಧಿಕಾರಿಗಳು ಯುಜಿಸಿ ಸಮಿತಿಯ ಆದರಾತಿಥ್ಯಕ್ಕಾಗಿ 2011ರ ಮೇ 20ರಂದು ವಿವಿಯಿಂದ ರು. 18.07 ಲಕ್ಷ ಮುಂಗಡ ಪಡೆದಿದ್ದರು. ಇದರಲ್ಲಿ ವೆಚ್ಚ ಭರಿಸಿ ಉಳಿದ ರು. 6.24 ಲಕ್ಷವನ್ನು ಎರಡು ತಿಂಗಳು ತಮ್ಮಲ್ಲಿಯೇ ಇಟ್ಟುಕೊಂಡು ನಂತರ 24-8-2011ರಂದು ವಿವಿಗೆ ವಾಪಸ್ ಮಾಡಿ ನಷ್ಟ ಉಂಟು ಮಾಡಿದ್ದರು. ಆಡಿಟರ್ ಹೆಸರಿನಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ ರು. 77,600 ಖೋಟಾ ಬಿಲ್ ನೀಡಿರುವ ಬಗ್ಗೆ ಸ್ವತಃ ಸರ್ಕಾರಿ ಲೆಕ್ಕ ಪರಿಶೋಧಕರು ಕುಲಸಚಿವರಿಗೆ ಬರೆದ ಪತ್ರದಲ್ಲಿ ಬಹಿರಂಗಗೊಂಡಿದೆ. ಸರ್ಕಾರಿ ಲೆಕ್ಕ ಪರಿಶೋಧಕರ ಕಚೇರಿ ಹೆಸರನ್ನು ದುರುಪಯೋಗ ಮಾಡಿರುವ ವಿವಿ ಅಧಿಕಾರಿಗಳ ಇಂಥ ಪ್ರಕರಣ ವಿಷಾಧನೀಯ ಎಂದರು.
ಪ್ರಕರಣಕ್ಕೆ ಕಾರಣರಾದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ, ಪ್ರಕರಣವನ್ನು ಉನ್ನತಮಟ್ಟದ ಇಲಾಖೆ, ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement