ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೆಪ ಹೇಳದೆ ಶೀಘ್ರ ಕಾಮಗಾರಿ ಮುಗಿಸಿ

Rashmi Kasaragodu
Updated On : 26 May 2014, 11:57 am

ನವಲಗುಂದ: ತಾಲೂಕಿನಲ್ಲಿ ಆಮೆಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಮುಗಿಸಬೇಕೆಂದು ತಾಪಂ ಅಧಿಕಾರಿಗಳಿಗೆ ಶಾಸಕ ಎನ್.ಎಚ್. ಕೋನರಡ್ಡಿ ತಾಕೀತು ಮಾಡಿದ್ದಾರೆ.
ನವಲಗುಂದ ತಾಪಂ ಸಭಾಭವನದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಹಲವು ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಿದ ಅವರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿವಿಧ ಕಾಮಗಾರಿ ಪರಿಶೀಲನೆ ಮಾಡಿ ವರದಿ ನೀಡುವಂತೆಯೂ ಶಾಸಕರು ಸೂಚಿಸಿದರು.
ತಾಲೂಕಿನ ಮೊರಬ, ಶಲವಡಿ, ನಲವಡಿ, ಅಳಗವಾಡಿ, ಹನಸಿ ಗ್ರಾಮಗಳಿಗೆ ರು. 9.50 ಲಕ್ಷ ವೆಚ್ಚದಲ್ಲಿ ಜಿಮ್ ಸೌಕರ್ಯದ ಉಪಕರಣಗಳ ಮಾಹಿತಿ ಕೇಳಿದ ಶಾಸಕರು, ಗ್ರಾಮೀಣ ಪ್ರದೇಶದ ಯುವಕರಿಗೆ ವ್ಯಾಯಾಮಕ್ಕಾಗಿ ಅನುಕೂಲವಾಗುವ ಸಲಕರಣೆಗಳನ್ನು ಆಯಾ ಗ್ರಾಮದಲ್ಲಿ ಜಿಮ್ ಸಾಮಗ್ರಿ ಪರಿಶೀಲಿಸಿ ಗ್ರಾಮದ ಯುವಕರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ ಅಧಿಕಾರಿಗಳಿಗೆ ಏಷ್ಟೇ ಹೇಳಿದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ. ಕುಂಟು ನೆಪ ಹೇಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಕಳಪೆ ಬಿತ್ತನೆ ಬೀಜಗಳನ್ನು ವಿತರಿಸಿದ್ದು ಕಂಡುಬಂದಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದಲ್ಲಿರುವ ಕೃಷಿ ಅಧಿಕಾರಿ ರೈತರಿಗೆ ಸಮರ್ಪಕವಾದ ಮಾಹಿತಿ ಒದಗಿಸುತ್ತಿಲ್ಲವೆಂದು ದೂರುಗಳು ಬಂದಿರುವುದರಿಂದ ಅವರಿಗೆ ಎಚ್ಚರಿಕೆಯ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
ತಾಪಂ ಸದಸ್ಯರಾದ ನಿಂಗಪ್ಪ ಬಾರಕೇರ, ಮಲ್ಲನಗೌಡ ರಾಟಿಮನಿ, ಚನ್ನಬಸು ಪಡೆಸೂರ, ಸಾವಿತ್ರಿ ಕುರ್ಲಗೇರಿ, ಪುಂಡಲಿಕ ಪಿಡ್ಡಣ್ಣವರ ಇದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಂ. ಸವದತ್ತಿ, ತಾಪಂ ಉಪಾಧ್ಯಕ್ಷೆ ನೀಲವ್ವ ತಳವಾರ, ಹಲವು ಇಲಾಖೆಗಳ ಅಧಿಕಾರಿಗಳಾದ ಜಿ.ಡಿ. ಜೋಶಿ, ಉಮಾಪತಿ, ಬಿ.ಎಸ್. ಮಾಯಾಚಾರಿ, ನಂದಾ ಹನುಮರಟ್ಟಿ, ಅನಿಗೌಡರ, ಲಕ್ಷ್ಮಣ ನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement