ಇಂದು ತಂಬಾಕು ವಿರೋಧಿ ದಿನಾಚರಣೆ
ಹುಬ್ಬಳ್ಳಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಹಾಗೂ ವಾರ್ತಾ ಇಲಾಖೆಯ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಂಗವಾಗಿ ಪಾಲಿಕೆ ಸಭಾಭವನದಲ್ಲಿ ಮಧ್ಯಾಹ್ನ 2ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಗಣೇಶ ಪಡಿಯಾರ ಕಾರ್ಯಕ್ರಮ ಉದ್ಘಾಟಿಸುವರು. ಹುಬ್ಬಳ್ಳಿ ತಾಲೂಕು ಮುಖ್ಯ ವೈದ್ಯಾಧಿಕಾರಿ ಪಿ.ಎನ್. ಬಿರಾದರ ಅಧ್ಯಕ್ಷತೆ ವಹಿಸುವರು. ಜೆಎಂಎಫ್‌ಸಿ ಒಂದನೇ ನ್ಯಾಯಾಲಯ ಸರ್ಕಾರಿ ಸಹಾಯಕ ಅಭಿಯೋಜಕ ಎಸ್.ಬಿ. ದಯಣ್ಣವರ ಹಾಗೂ ಐಆರ್‌ಸಿಎಸ್ ಉಪಾಧ್ಯಕ್ಷ ತಾಮಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು. ವಕೀಲರಾದ ಸಿ.ಎಚ್. ಸಜ್ಜನಶೆಟ್ಟರ, ಕೆ.ಸಿ.ಪಾಟೀಲ, ಡಾ.ವಿ.ಬಿ. ನಿಟಾಲಿ, ಡಾ. ಬಂಟ ದತ್ತರಾಜ ಉಪನ್ಯಾಸ ನೀಡಲಿದ್ದಾರೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.