ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಿಎಸ್‌ವೈ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ: ಶಿವರಾಜ್

Srinivasa Murthy VN
Updated On : 30 Apr 2013, 10:39 am

ಕ.ಪ್ರ. ವಾರ್ತೆ ಸುರಪುರ ಏ. 29
ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಮಲ್ಲೇಶಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಯಡಿಯಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಯಡಿಯೂರಪ್ಪ ಅಧಿಕಾರವಧಿಯಲ್ಲಿ ಜಾರಿ ಮಾಡಿದ ಜನಪರ ಕಾರ್ಯಗಳು ಜನ ಮೆಚ್ಚುಗೆಯಾಗಿವೆ.
ಹೀಗಾಗಿ ನಿತ್ಯವೂ ಜನ ಸಾಗರೋಪಾದಿಯಲ್ಲಿ ಪಕ್ಷಕ್ಕೆ ಸೇರುತ್ತ ಅಪಾರ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತರ ಉತ್ಸಾಹ ನನ್ನನ್ನು ಗೆಲವಿನ ಅಂಚಿಗೆ ತಂದು ನಿಲ್ಲಿಸಿದೆ. ಈ ಚುನಾವಣೆಯಲ್ಲಿ ನನ್ನ ಗೆಲವು ಖಚಿತ ಎಂದರು.
ಮತದಾರರಲ್ಲಿ ತಪ್ಪು ಭಾವನೆ: ನಿತ್ಯ ಕಾರ್ಯಕರ್ತರ ಸೇರ್ಪಡೆಯಿಂದ ಪಕ್ಷ ಬಲಿಷ್ಠಗೊಳ್ಳುತ್ತಿದೆ. ಕಾರ್ಯಕರ್ತರ ಹೆಚ್ಚಳವಾಗುತ್ತಿರುವುದು ನನ್ನ ವಿರೋಧಿ ಪಕ್ಷದವರಲ್ಲಿ ನಡುಕು ಶುರುವಾಗಿದೆ. ಪಕ್ಷ ಬಲಗೊಳ್ಳುತ್ತಿರುವುದನ್ನು ನೋಡಿ ವಿರೋಧಿಗಳು ಅವನು ಹೊರಗಿನವನು, ನಾವು ಇಲ್ಲಿಯವರಾಗಿದ್ದು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ಸದಾ ನಿಮ್ಮೊಂದಿಗಿರುತ್ತೇವೆ. ನನ್ನನ್ನು ಬೆಂಬಲಿಸಿ ಎಂದು ಹತಾಶ ಭಾವನೆಯಿಂದ ಮತದಾರರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೆಲ್ಲಿಸಲು ಮನವಿ: ನಾನು ಕ್ಷೇತ್ರದ ಅಭಿವೃದ್ಧಿ ಮತ್ತು ಜನಸೇವೆ ಮಾಡಬೇಕು ಎಂಬ ಕನಸಿನೊಂದಿಗೆ ಭಾಲ್ಕಿಯಿಂದ ಇಲ್ಲಿಗೆ ಬಂದಿದ್ದೇನೆ. ಇಲ್ಲಿಯೇ ಇದ್ದು ನಿಮ್ಮ ಸೇವೆ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಸೋಲಿನ ಭೀತಿಯಲ್ಲಿರುವ ನನ್ನ ವಿರೋಧಿಗಳು ಮಾಡುವ ಅಪಪ್ರಚಾರಕ್ಕೆ ಮತದಾರರು ಕಿವಿಗೊಡಬಾರದು. ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ತೆಂಗಿನಕಾಯಿ ಗುರುತಿಗೆ ಮತನೀಡಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಗುರುಪ್ರಸಾದ, ಹಣಮಂತ್ರಾಯಗೌಡ, ನಾಗಪ್ಪ ಕೆಂಭಾವಿ, ನಾಗಪ್ಪ ಜೊಗಂಡಭಾವಿ, ಶಿವಪ್ಪ ಪಿರಾಪುರ, ಸೋಮಲಿಂಗಯ್ಯ ಹಿರೇಮಠ, ಬಸವರಾಜ ಸಾಹು, ಪೂಜಪ್ಪ, ನಾಗಪ್ಪ ಪೂಜಾರಿ, ಮಾಳಪ್ಪ, ಮುದಕಪ್ಪ ಆಲ್ದಾಳ, ತಿಪರಡ್ಡಿ ಇತರರು ಕೆಜೆಪಿ ಸೇರ್ಪಡೆಯಾದರು.
ಮುಖಂಡರಾದ ರಂಗನಗೌಡ ದೇವಿಕೇರಿ, ಮಲ್ಲುದಂಡಿನ, ರಾಘವೇಂದ್ರ ಮಾಚಗುಂಡಾಳ, ರಮೇಶ ನಂಬಾ, ಮುದಕಗೌಡ ಹೆಬ್ಬಾಳ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement