ರೋಡ್ ಶೋ ಮೂಲಕ ಮುದ್ನಾಳ ಮತಯಾಚನೆ
ಗುರುಮಠಕಲ್: ತಮ್ಮ ಅಪಾರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಗುರುಮಠಕಲ್ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರು ಸೋಮವಾರ ಪಟ್ಟಣದ ವಿವಿಧ ವಾರ್ಡುಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.
ಕ್ಷೇತ್ರವನ್ನು ಅನೇಕ ವರ್ಷಗಳಿಂದ ಪ್ರತಿನಿಧಿಸಿದವರಿಂದ ಜಿಡ್ಡುಗಟ್ಟಿದ ವಾತಾವರಣ ಉಂಟಾಗಿದೆ. ಹೆಜ್ಜೆಹೆಜ್ಜೆಗೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿಂದಿನ ಶಾಸಕರು ಜನರ ಆಶೋತ್ತರಗಳಿಗೆ ಸ್ಪಂದಿಸದ್ದರಿಂದ ಅವರು ಬೇಸತ್ತಿದ್ದಾರೆ. ಬದಲಾವಣೆಗೆ ಇದು ಸಕಾಲವಾಗಿದೆ. ಅದಕ್ಕಾಗಿ ಮತದಾರರು ಕಾಯುತ್ತಿದ್ದಾರೆ. ಈಗ ಕಾಲಬದಲಾಗಿದ್ದು, ಮತದಾರರು ಪ್ರಜ್ಞಾವಂತರಾಗಿದ್ದಾರೆ. ಯಡಿಯೂರಪ್ಪ ಜನಪರ ಕಾರ್ಯಕ್ರಮಗಳು ಪ್ರತಿಯೊಬ್ಬ ವ್ಯಕ್ತಿಗೂ ತಲುಪಿದೆ. ಆದ್ದರಿಂದ ಈ ಬಾರಿ ಕೆಜೆಪಿಯನ್ನು ಬೆಂಬಲಿಸಲು ಕ್ಷೇತ್ರದ ಜನತೆ ನಿರ್ಧರಿಸಿದ್ದಾರೆ. ಆದ್ದರಿಂದ ತಮ್ಮ ಗೆಲವು ನಿಶ್ಚಿತ ಎಂದು ಮುದ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ನಾಗರತ್ನಾ ಕುಪ್ಪಿ, ಮಹೇಶಬಾಬು, ಭೀಮಣ್ಣಗೌಡ ಕ್ಯಾತನಾಳ, ನರಸಿಂಹರಡ್ಡಿ ನಜಾರಪುರ, ಶರಣಗೌಡ ಬಾಡಿಯಾಳ, ವೆಂಕಟರಡ್ಡಿ ವಡವಟ್, ರಾಜೇಂದ್ರ ಕಲಾಲ್, ಚಂದುಲಾಲ ಚೌದ್ರಿ, ವೆಂಕಟಪ್ಪ ಅವಾಂಗಪುರ, ಪರಶುರಾಮ ರೋಡ್ ಶೋದಲ್ಲಿ ಭಾಗವಹಿಸಿದ್ದರು.
ಸಿ. ಗುರುನಾಥ ಸಹೋದರ ಆತ್ಮಹತ್ಯೆ
ಗುಲ್ಬರ್ಗ: ಮಾಜಿ ಸಚಿವ ಹಾಗೂ ಚಿತ್ತಾಪುರ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಸಿ. ಗುರುನಾಥ ಅವರ ಸಹೋದರ ಭೈಲಪ್ಪ ಚಂದ್ರಾಮ (70) ಚಲಿಸುತ್ತಿದ್ದ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಹಾಬಾದ್ ಎಸಿಸಿ ಕಂಪನಿ ಹತ್ತಿರ ರೇಲ್ವೆ ಹಳಿಯಲ್ಲಿ ಚಲಿಸುತ್ತಿದ್ದ ರೈಲಿಗೆ ಬಿದ್ದು ಇವರು ಸೋಮವಾರ ಬೆಳಗಿನ ಜಾವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾದ ಭೈಲಪ್ಪ ಅವರು ಸಮಾಜ ಸೇವಕರಾಗಿದ್ದು, ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂಬುವುದನ್ನು ತಿಳಿದು ಬಂದಿಲ್ಲ. ಇವರು ಶಹಾಬಾದ್ ಅಪ್ಪರಮಡ್ಡಿ ಒಂದರಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ವಾಡಿ ರೇಲ್ವೆ ಪೊಲೀಸ್ ಠಾಣೆಯ ಎಎಸ್ಐ ಮಹ್ಮದ್ ಹುಸೇನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
'ಜನರ ಒಲವು ಕಾಂಗ್ರೆಸ್ ಕಡೆಗೆ'
ಹುಣಸಗಿ: ಬಿಜೆಪಿ ಹಾಗೂ ಜೆಡಿಎಸ್ ದುರಾಡಳಿತದಿಂದ ಬೇಸತ್ತಿರುವ ಜನತೆ ಈ ಬಾರಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಲಿದ್ದಾರೆ. ಕ್ಷೇತ್ರದಲ್ಲೂ ತಮ್ಮ ಗೆಲುವು ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ ಹೇಳಿದರು. ಸೋಮವಾರ ಹುಣಸಗಿ ಪಟ್ಟಣದ ದಲಿತರ ಕಾಲನಿಯಲ್ಲಿ ಮತಯಾಚಿಸಿ ಮಾತನಾಡಿದರು. ಜನರು ಈ ಸಲ ಚುನಾವಣೆಯಲ್ಲಿ ಬದಲಾವಣೆಯನ್ನು ಬಯಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದು ಹೇಳಿದರು. ಹಿರಿಯ ಮುಖಂಡ ಸಂಗಪ್ಪ ಪೀರಾಪುರ, ಗ್ರಾಪಂ ಮಾಜಿ ಸದಸ್ಯ ಮರೆಪ್ಪ, ಶಂಕ್ರಪ್ಪ ಪೀರಾಪುರ, ಲೋಟರಾಜ್, ಭೀಮಪ್ಪ ಬೇವಿನಗಿಡದ, ಮಲ್ಲಪ್ಪ, ಸಣ್ಣಮಾನಪ್ಪ, ಮುದಕಪ್ಪ ಆನೇಕಿ, ಹಣಮಂತ ಚಾನಿ, ತಿಪ್ಪಣ್ಣ ಮಾಸ್ತರ, ಭೀಮಣ್ಣ ಇತರರು ಕಾಂಗ್ರೆಸ್ ಸೇರ್ಪಡೆಗೊಂಡರು.
ವದಂತಿಗಳಿಗೆ ಕಿವಿಗೊಡಬೇಡಿ: ವಣಿಕ್ಯಾಳ
ಕೆಂಭಾವಿ: ನಾನು ಯಾವೊಬ್ಬ ಅಭ್ಯರ್ಥಿಯ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಮತದಾರರನ್ನು ಗೊಂದಲಕ್ಕೆ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ. ಮತದಾರರು ಈ ರೀತಿಯ ಸುಳ್ಳು ಹೇಳಿಕೆಗಳಿಗೆ ಗಮನ ಕೊಡದೇ ನನ್ನನ್ನು ಆಶೀರ್ವದಿಸಬೇಕು ಎಂದು ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಶಂಕ್ರಣ್ಣ ವಣಿಕ್ಯಾಳ ಹೇಳಿದರು. ಅವರು ಸೋಮವಾರ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿ, ಕ್ಷೇತ್ರದಲ್ಲಿ ಮತದಾರರಿಂದ ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಅನಿಲರಾಜ ತುಂಬಿಗಿ, ವಿಜಯರೆಡ್ಡಿ ಪಾಟೀಲ್ ಮುದನೂರ, ಮಜರ್ ಖಾಜಿ, ಸುರೇಶ ಮಾಳಳ್ಳಿಕರ್, ಲಕ್ಷ್ಮಣ ದೊರೆ, ಇಮ್ರಾನ್, ಮೆಹೆಬೂಬ್ ಇತರರು ಇದ್ದರು.