ವಿಚಿತ್ರ ಹೆಣ್ಣು ಮಗು ಜನನ
ಆಕಾರದಲ್ಲಿ ಮನುಷ್ಯನಂತಿಲ್ಲ, ವಿಕಾರದಲ್ಲಿ ಹೇಳುವಂತಿಲ್ಲ
ಕನ್ನಡಪ್ರಭ ವಾರ್ತೆ ಜೇವರ್ಗಿ ಆ.11
ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎನ್ನುವಂತೆ ಮಾತೃ ವಾತ್ಸಲ್ಯ ಹುಟ್ಟಿದ ಮಗು ಹೀಗೆ ಇರಬೇಕೆಂದು ಪ್ರತಿಯೊಬ್ಬ ತಾಯಿ ವಾತ್ಸಲ್ಯ ಮಿಡಿಯುತ್ತಿರುತ್ತದೆ. ಆದರೆ ಆಕಾರದಲ್ಲಿ ಮನುಷ್ಯರಂತಿಲ್ಲ. ವಿಕಾರದಲ್ಲಿ ಹೇಳುವಂತಿಲ್ಲ ಎನ್ನುವಂತ ಮಗು ಜನಿಸಿದರೆ ಮಾತ್ರ ವಾತ್ಸಲ್ಯ ಹೇಗಾಗಲಿಕ್ಕಿಲ್ಲ.
ಹಣೆಯ ಬದಲು ಕಣ್ಣು: ಇಂತಹ ಮಗುಮೊಂದು ಜೇವರ್ಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ ಜನಿಸಿದೆ. ಜನಿಸಿದ ಹೆಣ್ಣು ಮಗುವಿನ ಅಂಗಾಂಗಗಳು ಒಂದಕ್ಕೊಂದು ತಾಳಮೇಳ ಇಲ್ಲದಂತಾಗಿದೆ. ಹಣೆಯ ಬದಲು ಅಲ್ಲಿ ಕಣ್ಣುಗಳು ಹುಟ್ಟಿಕೊಂಡಿವೆ. ಮುಖಕ್ಕಿಂತ ಹುಟ್ಟಿದ ಮಗುವಿನ ಬಾಯಿ ದೊಡ್ಡದಾಗಿದೆ. ಕಾಲುಗಳಿಗೆ ಬೆರಳುಗಳು ಇಲ್ಲ.
ಮೂಲತಃ ಚಿತ್ತಾಪುರ ತಾಲೂಕಿನ ಕುನ್ನೂರ್ ಗ್ರಾಮದ ಮಹಿಬೂಬ್ ಪಟೇಲ್ ಇವರ ಪತ್ನಿ ರಜೀಯಾಬೇಗಂ ಎಂಬ ದಂಪತಿಗಳಿಗೆ ಇಂತಹ ಮಗು ಜನಿಸಿದೆ. ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ ಪಟೇಲ್ ಪತ್ನಿಯ ತವರೂರು ಆಗಿದ್ದು, ಪ್ರಸೂತಿಗಾಗಿ ಜೇವರ್ಗಿ ಆಸ್ಪತ್ರೆಗೆ ಬಂದಾಗ ವೈದ್ಯಾಧಿಕಾರಿ ಡಾ. ಅಂಬಾರಾಯ ರುದ್ರವಾಡಿ ಹರಸಾಹಸ ಪಟ್ಟು ಸಾಮಾನ್ಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿ ಸಾಧಿಸಿದರು. ವಿಚಿತ್ರ ಮಗು ಜನನದ ನಂತರ ತಾಯಿ, ಮಗು ಆರೋಗ್ಯದಿಂದ ಇದ್ದಾರೆ.
ವಿಕಾರವಾಗಿ ಹುಟ್ಟಿದ ಮಗುವಿನಿಂದ ತಾಯಿಯ ಮನಸ್ಸು ವಿಚಲಿತಗೊಂಡಿದೆ. ಕುಟುಂಬ ಆತಂಕದಲ್ಲಿದ್ದಾರೆ.
ಆದರೆ ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿರುವ ವೈದ್ಯಲೋಕ ಈ ಮಗುವಿಗೆ ಚಿಕಿತ್ಸೆ ನೀಡಿ ಗುಣ ಪಡಿಸಬಹುದೇ ಕಾದು ನೋಡಬೇಕಾಗಿದೆ.
ವೈದ್ಯರ ಹೇಳಿಕೆ: ಜೇವರ್ಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಅಂಬಾರಾಯ ರುದ್ರವಾಡಿ ಅವರ ಹೇಳಿಕೆ ಪ್ರಕಾರ ಜನಿಸಿದ ಹೆಣ್ಣು ಮಗುವಿನ ಬೆಳವಣಿಗೆಯಲ್ಲಿ ಏರು ಪೇರಾಗಿದ್ದರಿಂದ ವಿಚಿತ್ರ ಮಗು ಜನಿಸಲು ಕಾರಣವಾಗಿದ್ದು, ಮಗುವಿನ ಪಾಲಕರಿಗೆ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೆ ಗುಣಮುಖವಾಗಬಹುದು ಎಂದು ಹೇಳಿದ್ದು, ತಾವು ಕೂಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವುದಾಗಿ ಹೇಳಿದ್ದಾರೆ.