ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮಾಜ ಸುಧಾರಕ ದಿ. ಕಟ್ಟಿಮನಿ ಸ್ಮರಣಾರ್ಹರು

Srinivasa Murthy VN
Updated On : 12 Aug 2013, 10:51 am

ಕನ್ನಡಪ್ರಭ ವಾರ್ತೆ  ಬೀದರ್  ಆ. 11
ಸಮಾಜದಲ್ಲಿನ ಅನ್ಯಾಯ, ಅಸಮಾನತೆ ಜನಸಾಮಾನ್ಯರ ಬದುಕಿನ ಬಗ್ಗೆ ನಿಷ್ಕಾಳಜಿ ವಹಿಸುವ ರಾಜಕೀಯ ಮುಖಂಡರ ಬರವಣಿಗೆಯ ವಿರುದ್ಧ ಖಡ್ಗ ಬೀಸಿದ್ದವರು. ಬೆಳಗಾವಿ ಮೂಲದ ದಿ. ಬಸವರಾಜ ಕಟ್ಟಿಮನಿ ಆಗಿದ್ದರು ಎಂದು ಹಿರಿಯ ಸಾಹಿತಿ ಪ್ರೊ. ವೀರೇಂದ್ರ ಸಿಂಪಿ ನುಡಿದರು.
ನಿಷ್ಠೂರವಾದಿ: ಅವರು ಜಿಲ್ಲಾ ಕಸಾಪ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ಆ. 10ರಂದು ಆಯೋಜಿಸಲಾದ ಬಸವರಾಜ ಕಟ್ಟಿಮನಿ ಜೀವನ ಹಾಗೂ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಕಟ್ಟಿಮನಿಯವರು ಬಹಳ ನಿಷ್ಠೂರವಾದಿಯಾಗಿದ್ದರು ಎಂದರು.
ಕಾರ್ಲಮಾರ್ಕ್ಸ್ ಸಿದ್ದಾಂತವನ್ನು ಒಪ್ಪಿಕೊಂಡು ಸಮಾನತೆಯ ತತ್ವ ಬೀರಲು ಬಹಳ ಶ್ರಮ ವಹಿಸಿದ್ದು ಬಸವರಾಜ್. ಅವರು 35 ಕಾದಂಬರಿಗಳನ್ನು ಬರೆದಿದ್ದು, “dÁÚ}ÛÂ dVÚ¥ÚßXÁÚß’ ಕಾದಂಬರಿ ಮೂಲಕ ಮಠಾಧಿಪತಿಗಳ ಕೆಂಗಣ್ಣಿಗೆ ಗುರಿಯಾದ್ದರೂ ಧೈರ್ಯದಿಂದ ಮುನ್ನಡೆದರು ಎಂದರು.
ಪ್ರತಿಭಾವಂತ: ಪ್ರೊ. ಬಿಆರ್ ಕೊಂಡಾ ಕಾರ್ಯಕ್ರಮ ಉದ್ಘಾಟಿಸಿ, ಕಟ್ಟಿಮನಿಯವರು ಪ್ರತಿಭಾವಂತರಾಗಿದ್ದರು. ಅವರ ಸಾಹಿತ್ಯ ಅಂತಹ ವಿಚಾರಗಳು ವ್ಯಕ್ತಪಡಿಸಿದ್ದನ್ನು ನಾವು ನೋಡಿದ್ದೇವೆ. ಅವರಲ್ಲಿ ಬಹಳ ಚಡಪಡಿಕೆ ಇತ್ತು. ಅದನ್ನು ಕೃತಿಗಳಲ್ಲಿ ಅಭಿವ್ಯಕ್ತಪಡಿಸಿದ್ದಾರೆ ಎಂದರು.
ಪ್ರೊ. ಪೂರ್ಣಿಮಾ ಜಾರ್ಜ್ ಅವರು ಕಟ್ಟಿಮನಿ ಜೀವನ ಕುರಿತು ಮಾತನಾಡಿ, ತಮ್ಮ ಬಾಲ್ಯದಿಂದಲೇ ಕಟ್ಟಿಮನಿಯವರು ಮಾತೃ ಭಾಷೆ, ಭಾರತ ದೇಶದ ಬಗ್ಗೆ ಅಭಿಮಾನ ಹೊಂದಿದ್ದರು. ಅವರ ಮಾಡಿ ಮಡಿದವರು ಕಾದಂಬರಿಯಲ್ಲಿ ದೇಶಾಭಿಮಾನ ಎಂದರೆ ಎಂಥದ್ದು, ಎಂದು ಅಲ್ಲಿಯ ಪಾತ್ರಗಳ ಮುಖಾಂತರ ಅಭಿವ್ಯಕ್ತಪಡಿಸಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮಾತನಾಡಿ, ಕಲೆ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು. ಬಸವರಾಜ ಹದನೂರ ಕವಿತೆ ಓದಿದರು. ರೇವಣಸಿದ್ದಪ್ಪ ಜಲಾದೆ, ಸಂಗಮೇಶ ನಾಶಿಗಾರ ಉಪಸ್ಥಿತರಿದ್ದರು ಜಿಲ್ಲಾ ಕಸಾಪ ಅಧ್ಯಕ್ಷರಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದರು.
ಸಂಜೀವಕುಮಾರ ಅತಿವಾಳೆ, ಎಂಜಿ ದೇಶಪಾಂಡೆ, ಬಿಎಂ ಬಿರಾದಾರ, ದೇಶಾಂಶ ಹುಡುಗಿ, ಮಾಣಿಕ ನೇಳಗೆ, ರಘುಶಂಖ ಭಾತಂಬ್ರಾ, ಎಂ.ಎಸ್. ಮನೋಹರ್, ದಾನಿ ಬಾಬು ಮತ್ತಿತರರು ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಬಸವರಾಜ ಸ್ವಾಗತಿಸಿ ಶಾಮರಾವ ನೆಲವಾಡೆ ನಿರೂಪಿಸಿ, ಶ್ರೀಕಾಂತ ಬಿರಾದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement