ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಸ್ಪೀಟ್: ಪಂ. ರಾಜ್ ಸಿಬ್ಬಂದಿ ಬಂಧನ

Srinivasa Murthy VN
Updated On : 13 Aug 2013, 10:09 am

ಗುಲ್ಬರ್ಗ: ಗುಲ್ಬರ್ಗದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯ ಐದು ದಿನಗೂಲಿ ನೌಕರರು ಕಚೇರಿ ಸಮಯದಲ್ಲಿ ಮದ್ಯಪಾನ ಮಾಡಿ ಕಚೇರಿ ಆವರಣದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಖಚಿತ ದೂರಿನ ಮೇರೆಗೆ ಅಲ್ಲಿಗೆ ಹಠಾತ್ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಪಾನಮತ್ತರಾಗಿ ಇಸ್ಪೀಟ್ ಆಡುತ್ತಿರುವ ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಪುಂಡಲೀಕ್ ತಂದೆ ಶಂಕರ್ ಭಾವಿನವರ್, ಶರಣಪ್ಪ ತಂದೆ ಭೀಮಣ್ಣ ಮಡಿವಾಳ ಹಾಗೂ ಶರಣಪ್ಪ ತಂದೆ ಶಂಕ್ರಪ್ಪ ಬೀದರ್ ಬಂಧಿತರು.
ಇನ್ನುಳಿದ ಬಸವರಾಜ ಚಿಂಚೋಳಿ ಹಾಗೂ ಪಂಡಿತ ರಾಜಾಪುರ ತಪ್ಪಿಸಿಕೊಂಡಿದ್ದು ಪೊಲೀಸರಿಗೆ ಮುಂದಿನ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ಐದು ಸಿಬ್ಬಂದಿ ವಿರುದ್ಧ ಕೇಸು ದಾಖಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪುರಾಣ ಪ್ರವಚನ ಕಾರ್ಯಕ್ರಮ
ಗುಲ್ಬರ್ಗ: ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸದ್ಗುರು ಸಿದ್ದಾರೂಢ ಮಹಾಸ್ವಾಮಿ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು.
ರೇವಣಸಿದ್ದ ಮಹಾಸ್ವಾಮೀಜಿ ಪ್ರವಚನ ನೀಡುತ್ತ, ಸಿದ್ಧರೂಢರು ಶಿರ- ಪ್ರದಾನ ವ್ಯಕ್ತಿಯಾಗಿರದೆ, ಹೃದಯ ಪ್ರದಾನ ವ್ಯಕ್ತಿಯಾಗಿದ್ದರು. ಅವರು ಬಾಲ್ಯದ ಜೀವನವನ್ನು ನೋಡಿದಾಗ ಆರಂಭದಿಂದಲೇ ನರಮನುಷ್ಯರನ್ನಾಗಿ ತೋರದೇ, ಶಿವ ಶಿಶುವಾಗಿಯೇ ಕಂಡಿದ್ದರು. ಅವರ ಬಾಲ್ಯದ ಲೀಲೆಗಳು ತುಂಬಾ ಮನಮೋಹಕವಾಗಿವೆ ಎಂದರು.
ಪುರಾಣ ಪ್ರವಚನಕಾರರಾದ ಮಲ್ಲಿಕಾರ್ಜುನ ಸ್ವಾಮಿ ಟೆಂಗಳಿ, ಪಾಲಿಕೆ ಸದಸ್ಯ ರಮಾನಂದ ಉಪಾಧ್ಯಾಯ, ಮಲ್ಲಿನಾಥ ದೇಶಮುಖ, ಶಿವರಾಜ ಅಂಡಗಿ, ಸಂಸ್ಥೆಯ ಅಧ್ಯಕ್ಷ ಬಸವರಾಜ ಪುಣ್ಯಶೆಟ್ಟಿ, ಭೋಗೋಜಿ, ಜಾಬಶೆಟ್ಟಿ, ಬಿ.ಎಂ. ಪೊಲೀಸ್ ಪಾಟೀಲ್, ಶಂಕರ ರೆಡ್ಡಿ, ಕಲ್ಯಾಣರಾವ ಪಟವಾರಿ, ಎಸ್.ಜಿ. ಬಿರಾದಾರ, ರಾಣೋಜಿ, ಗಂಗಾಧರ ಕಣ್ಣಿ, ಮಚ್ಚೇಂದ್ರನಾಥ ಮೂಲಗೆ, ರಮೇಶ ಪಾಟೀಲ್, ಮಂದಕನಳ್ಳಿ ಮಾಳಗೆ, ಬೆಳಕೋಟೆ ಪಾಟೀಲ್, ಬಸವರಾಜ ಮಗಲಿ, ಗುರುಲಿಂಗಪ್ಪ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement